ಗುರುವಾರ, 22 ಅಕ್ಟೋಬರ್ 2026
ಮಂಗಳೂರು

ದಕ್ಷಿಣ ಕನ್ನಡ: ನಾಳೆ ಆರೋಗ್ಯ ಸಚಿವ ಯು.ಟಿ ಖಾದರ್ ಜಿಲ್ಲಾ ಪ್ರವಾಸ

ಮಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಜೂ.7ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅಂದು ಬೆಳಗ್ಗೆ 8:30ಕ್ಕೆ ಉಳ್ಳಾಲ ಸೈಯದ್ ಮದನಿ ದರ್ಗಾ, 9:30ಕ್ಕೆ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ, 10ಕ್ಕೆ ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಚರ್ಚ್, ಮಧ್ಯಾಹ್ನ 12ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡುವರು.

ಮಧ್ಯಾಹ್ನ 2ಕ್ಕೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯ ಬಂಟ್ವಾಳದಲ್ಲಿರುವ ಮನೆಗೆ ಭೇಟಿ, ಅಪರಾಹ್ನ 3:30ಕ್ಕೆ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ, ಸಂಜೆ 5:30ಕ್ಕೆ ಮಂಗಳೂರು ಬಿಷಪ್ ಹೌಸ್‌ನಲ್ಲಿ ಬಿಷಪರ ಭೇಟಿ, 6:30ಕ್ಕೆ ಅಂಬ್ಲಮೊಗರು ಕುಂಡೂರು ಜುಮಾ ಮಸೀದಿಯ ಸ್ವಾಗತ ದ್ವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಯು.ಟಿ. ಖಾದರ್ ಕರ್ನಾಟಕ ಸರ್ಕಾರದ ನೂತನ ಆರೋಗ್ಯ ಸಚಿವರಾಗಿ ನೇಮಕಗೊಂಡ ಬಳಿಕ ಅವರ ಪ್ರಥಮ ಜಿಲ್ಲಾ ಪ್ರವಾಸ ಇದಾಗಿದೆ.

ಸಂಬಂಧಿತ ಸುದ್ದಿಗಳು