ಮಂಗಳೂರು: 2ನೇ ವರ್ಷದ ತುಳು ವಿದ್ಯಾರ್ಥಿ ಸಮ್ಮೇಳನ ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಈ ಸಮ್ಮೇಳನವು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿರುತ್ತದೆ.
ಸಮ್ಮೇಳನದ ಅಂಗವಾಗಿ ತುಳು ಭಾಷಣಸ್ಪರ್ಧೆ, ತುಳು ಅಲಂಕಾರ ಮತ್ತು ವಸ್ತ್ರವಿನ್ಯಾಸ(ತುತ್ತೈತ), ತುಳು ಚಲನಚಿತ್ರ ಗೀತಾ ಗಾಯನ, ರಸಪ್ರಶ್ನೆ ಹಾಗೂ ತುಳು ಜಾನಪದ ನೃತ್ಯ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ತೆರನಾದ ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಾದ ಈ ಸಮ್ಮೇಳನವು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಮೀಸಲಾಗಿರುವುದರಿಂದ ಸಮ್ಮೇಳನದ ಅಧ್ಯಕ್ಷರು ಹಾಗೂ ಉದ್ಘಾಟಕರು ವಿದ್ಯಾರ್ಥಿಗಳೇ ಆಗಿರುತ್ತಾರೆ. ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳ ಆಯ್ಕೆಗಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ಆಯಾ ಕಾಲೇಜಿನ ಪ್ರಾಂಶುಪಾಲರುಗಳು ದೃಢೀಕರಣದೊಂದಿಗೆ ಕಳುಹಿಸಿಕೊಡಬೇಕಾಗಿ ತುಳು ಪರಿಷತ್ ಅಧ್ಯಕ್ಷರಾದ ಶುಭೋದಯ ಆಳ್ವರ ಪತ್ರಿಕಾ ಪ್ರಟಣೆಯಲ್ಲಿ ಕೋರಿದ್ದಾರೆ.