ಮಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ದೇರೆಬೈಲ್ ಕೊಂಚಾಡಿಯ ಇಂದಿರಾ ಗಾಂಧಿ ಮೆಮೋರಿಯಲ್ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಸ್ 625ರಲ್ಲಿ 602 (ಶೇ 96.32 ) ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಕಾಶ ಭವನದ ನಿವಾಸಿ ಮೊಹಮ್ಮದ್ ಶರೀಫ್ ಮತ್ತು ಸಫಿಯಾ ದಂಪತಿಯ ಪುತ್ರನಾಗಿರುವ ಮೊಹಮ್ಮದ್ ಶಮ್ಮಾಸ್ ಇಂಗ್ಲಿಷ್-120, ಕನ್ನಡ-99, ಹಿಂದಿ-99, ಗಣಿತ-93, ವಿಜ್ಞಾನ-94, ಸಮಾಜ ವಿಜ್ಞಾನ ವಿಷಯದಲ್ಲಿ 97 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಟಾಪರ್ ಎನಿಸಿಕೊಂಡಿದ್ದಾರೆ.