ಮಂಗಳೂರು: ಉಳ್ಳಾಲ ಶ್ರೀನಿವಾಸ್ ಮಲ್ಯರ ಪುತ್ಥಳಿಯನ್ನು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಶ್ರೀನಿವಾಸ್ ಮಲ್ಯ ಜನ್ಮದಿನ ಆಚರಣಾ ಸಮಿತಿ ನಿಯೋಗ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಿದೆ.
ಮಂಗಳೂರು ನಗರದ ಪದುವ ಶಾಲೆ ಮುಂಭಾಗದಲ್ಲಿರುವ ನವ ಮಂಗಳೂರಿನ ನಿರ್ಮಾತೃ ಮಾಜಿ ಲೋಕಸಭಾ ಸದಸ್ಯ ಉಳ್ಳಾಲ ಶ್ರೀನಿವಾಸ್ ಮಲ್ಯರ ಪುತ್ಥಳಿಯು ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ನಿಟ್ಟಿನಲ್ಲಿ ಸ್ಥಳಾಂತರಗೊಳ್ಳಲು ಸಿದ್ಧವಾಗಿದ್ದು, ಪುತ್ಥಳಿಯನ್ನು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಉಳ್ಳಾಲ ಶ್ರೀನಿವಾಸ್ ಮಲ್ಯ ಅವರು ಮಂಗಳೂರಿನ ಇತಿಹಾಸದ ಪುಟಗಳಲ್ಲಿ ಇಂದಿಗೂ ಅಮರ. ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ. ಇಂಥಹ ಮಾಹನ್ ವ್ಯಕ್ತಿಗೆ ಗೌರವ ಸಲ್ಲಿಸಬೇಕಾದದ್ದು ನಮ್ಮಲ್ಲೆರ ಕರ್ತವ್ಯವಾಗಿದೆ. ಮಲ್ಯರ ಪುತ್ಥಳಿಯನ್ನು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಿ, ಅಭಿವೃದ್ಧಿ ಗೊಳಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದ ಸಮಿತಿಯ ಅಧ್ಯಕ್ಷ ಟಿ.ಸಿ. ಗಣೇಶ್, ಸಂಚಾಲಕಿ ಮಂಜುಳಾ ನಾಯಕ್, ಪ್ರ.ಕಾರ್ಯದರ್ಶಿ ಮೊಹಮ್ಮದ್ ಕುಂಜತ್ತಬೈಲ್, ಪಾಲಿಕೆಯ ಸದಸ್ಯರಾದ ಎಂ.ಶಶಿಧರ್ ಹೆಗ್ಡೆ, ನವೀನ್.ಆರ್.ಡಿಸೋಜ, ಭಾಸ್ಕರ್ ಮೊಯ್ಲಿ, ನಾಮ ನಿರ್ದೇಶಿತ ಸದಸ್ಯ ಹೇಮಂತ್ ಗರೋಡಿ, ಮಾಜಿ ಪಾಲಿಕೆ ಸದಸ್ಯ ದೀಪಕ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಸಮಿತಿಯ ಪ್ರಮುಖರಾದ ಹೊನಯ್ಯ, ದುರ್ಗಾ ಪ್ರಸಾದ್, ಶಂಕುಂತಳಾ ಕಾಮತ್, ಯೋಗೀಶ್ ನಾಯಕ್, ನೀತು ಶರಣ್, ರಿತೇಶ್ ಅಂಚನ್ ಮತ್ತಿತರು ಉಪಸ್ಥಿತರಿದ್ದರು.