ಮಂಗಳೂರು: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಕೋಡಿಕಲ್ ಅವರನ್ನು ನೇಮಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಆದೇಶಿಸಿದ್ದಾರೆ.
ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಅವರ ನಿರ್ದೇಶನದ ಮೇರೆಗೆ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಮಾರ್ಗದರ್ಶನದ ಮೇರೆಗೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಶಿಫಾರಸ್ಸಿನಂತೆ ಪ್ರಕಾಶ್ ಕೋಡಿಕಲ್ ಅವರು ನೇಮಕಗೊಂಡಿದ್ದಾರೆ.
ಪ್ರಕಾಶ್ ಕೋಡಿಕಲ್ ಅವರು ದ.ಕ.ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಸಂಚಾಲಕರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ.) ಅಧ್ಯಕ್ಷರಾಗಿ, ಬಿಜೈ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ, ಕಾಪಿಕಾಡು ಶ್ರೀ ಗುರುದೇವಿ ಕ್ರಿಕೇಟರ್ಸ್ ಸದಸ್ಯರಾಗಿ, ಬಿಜೈ ಕಾಪಿಕಾಡು ಕುದ್ಮುಲ್ ಸ್ಮಾರಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿದ್ದಾರೆ. ಪ್ರಸ್ತುತ ಕೊಟ್ಟಾರ ಪ್ಲೇ ಬಾಯ್ಸ್ ಕ್ರಕೇಟರ್ಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.