ರಾಂಚಿ: ಮೋದಿ ಒಬ್ಬ ಹುಟ್ಟ ಸುಳ್ಳುಕೋರ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಗುಜರಾತ್‌ಗೆ ಸುವರ್ಣಯುಗ ಬಂದಿತೇ? ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್ ನ ಪಂಕಿ ಹಾಗೂ ಛತರ್‌ಪುರ್ ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನರೇಂದ್ರ ಮೋದಿ ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ಎರಡು ಕೋಟಿ ಉದ್ಯೋಗ ಕೊಡುತ್ತೇನೆ, ಕಪ್ಪು ಹಣ ವಾಪಸ್ ತರುತ್ತೇನೆ, ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದಿದ್ದರು. ಆದರೆ ಅವರು ಏನೂ ಮಾಡಲಿಲ್ಲ, ಯಾಕೆಂದರೆ ಅವರು ಸುಳ್ಳಿನ ನಾಯಕ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು ಅದಾನಿ ಮತ್ತು ಅಂಬಾನಿ ಜೊತೆ ನಡೆಸುತ್ತಿದ್ದಾರೆ. ನಾನು ಮತ್ತು ರಾಹುಲ್ ಗಾಂಧಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡುತ್ತಿದ್ದೇವೆ. ಚುನಾಯಿತ ಸರ್ಕಾರಗಳನ್ನು ಉರುಳಿಸಲು ಶಾಸಕರನ್ನು ಮೇಕೆಗಳ ರೀತಿ ಖರೀದಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೋದಿ ಮತ್ತು ಶಾ, ಇಡಿ, ಸಿಬಿಐ ಮತ್ತು ಇತರೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ಬಳಸುತ್ತಿದ್ದಾರೆ. ನಾವು ಅದಕ್ಕೆಲ್ಲ ಹೆದರುವುದಿಲ್ಲ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. INDIA ಮೈತ್ರಿಕೂಟದ ಸರ್ಕಾರ ಸಂವಿಧಾನ ಪಾಲಿಸಿ ಜನರ ಹಿತಕ್ಕಾಗಿ ಅವರ ಉನ್ನತಿಗಾಗಿ ಕೆಲಸ ಮಾಡಲಿದೆ ಎಂದ ಅವರು, ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ-ಆರ್.ಎಸ್.ಎಸ್ ನವರ ಕೊಡುಗೆ ಇಲ್ಲ. ಗಾಂಧಿಜೀ ಭಾರತ ಬಿಟ್ಟು ತೊಲಗಿ ಎಂದು ಕರೆ ಕೊಟ್ಟಾಗ RSS ನವರು ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದರು. ಇವರು ಇಂದು ನಮಗೆ ದೇಶ ಭಕ್ತಿ ಪಾಠ ಮಾಡುತ್ತಿದ್ದಾರೆ. ಬಿಜೆಪಿಯವರು ನಮ್ಮ ಸಂವಿಧಾನವನ್ನು ಕೊನೆಗೊಳಿಸಲು ಬಯಸುತ್ತಾರೆ. ಆದರೆ ನಾವು ಎಂದಿಗೂ ಆಗಲು ಬಿಡುವುದಿಲ್ಲ.” ಎಂದಿದ್ದಾರೆ.



