ಬೆಂಗಳೂರು: ಎಂ.ಎಂ.ವೈ.ಸಿ ಬೆಂಗಳೂರು ಇದರ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ಕ್ರೀಡಾಕೂಟ ಇತ್ತೀಚೆಗೆ ನಗರದ ಹೊರವಲಯದ ದೇವನಹಳ್ಳಿ ಸಮೀಪದ ಕುಂದಾಣ ಅಜ್ಜಿ ತೋಟ ಫಾರ್ಮ್ ಹೌಸ್ ನಲ್ಲಿ ಜರುಗಿತು.
ಈ ವೇಳೆ ಯುವಕರು, ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 225 ಮಂದಿ ಭಾಗವಹಿಸಿದ್ದರು. ಕುಟುಂಬದ ಸದಸ್ಯರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಕ್ಯಾಂಪ್ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಯಿತು.
ಮುಂದಿನ 2025ರ ಫೆಬ್ರವರಿಯಲ್ಲಿ MMYC ಸಾರಥ್ಯದಲ್ಲಿ ಬೆಂಗಳೂರಿನಲ್ಲಿ ‘ವಿಶ್ವ ಬ್ಯಾರಿ ಸಮ್ಮೇಳನ’ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಾಹಿದ್ ಖಾರ್ಯ ಖಾನ್, ಅಂಬುಲೆನ್ಸ್ ಡ್ರೈವರ್ ಸಿರಾಜುದ್ದೀನ್, ಅಖಿಲ್ ಪುತ್ತೂರು, ಇರ್ಷಾದ್ ದೇರಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಎಂ.ವೈ.ಸಿ ಗೌರವಾಧ್ಯಕ್ಷ ಉಮ್ಮರ್ ಹಾಜಿ, ಅಧ್ಯಕ್ಷ ಅಬೂಬಕ್ಕರ್ ಜಯನಗರ (ಅಬ್ಬು), ಉಪಾಧ್ಯಕ್ಷ ವಾಹಿದ್ ಖಾನ್, ವಕೀಲ ಅಬ್ದುಲ್ ಲತೀಫ್ ಬಡಗನ್ನೂರು, ಮುಖಂಡರಾದ ಬಶೀರ್ ಪುಣಚ, ಸಮದ್ ಸೊಂಪಾಡಿ, ಹಬೀಬ್ ನಾಳ, ನಿರ್ದೇಶಕರಾದ ಉಮ್ಮರ್ ಕುಂಞಿ ಸಾಲೆತ್ತೂರು, ಅಬ್ಬಾಸ್ ಸಿ.ಪಿ ಮತ್ತಿತರರು ಉಪಸ್ಥಿತರಿದ್ದರು.
ಅಖಿಲ್ ಪುತ್ತೂರು ಕಾರ್ಯಕ್ರಮದ ನಿರೂಪಿಸಿದರು. ಸಾಜಿದ್ ವಂದಿಸಿದರು. ಮುಖ್ಯಸ್ಥ ಜುನೈದ್ ಪಿ.ಕೆ ಕಾರ್ಯಕ್ರಮ ನಿರ್ವಹಿಸಿದರು.