ಮಂಗಳುರು: ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ರೂವಾರಿ ಯು.ಶ್ರೀನಿವಾಸ ಮಲ್ಯರ 123ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮಲ್ಯ ಜನ್ಮದಿನ ಆಚರಣಾ ಸಮಿತಿ ವತಿಯಿಂದ ಗುರುವಾರ ಕದ್ರಿ ಜೋಗಿ ಮಠ ಸಮೀಪದ ಶ್ರೀನಿವಾಸ ಮಲ್ಯ ಉದ್ಯಾವನದಲ್ಲಿ ಆಚರಿಸಲಾಯಿತು.
ಈ ವೇಳೆ ಮುಖಂಡರು ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಐವನ್ ಡಿಸೋಜ, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರೀಸ್, ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಮರ್ಥ ಭಟ್, ಮಲ್ಯ ಕುಟುಂಬಸ್ಥರಾದ ಉಳ್ಳಾಲ ವಿಜಿತಾತ್ಮ ಮಲ್ಯ , ಉಳ್ಳಾಲ ಬಾಲಚಂದ್ರ ಮಲ್ಯ, ಆಚರಣಾ ಸಮಿತಿಯ ಅಧ್ಯಕ್ಷ ಟಿ.ಸಿ ಗಣೇಶ್, ಪ್ರಧಾನ ಕಾರ್ಯದರ್ಶಿ ಅರ್ಜುನ್ ಭಂಡಾರ್ಕರ್, ಮ.ನ.ಪಾ ಸದಸ್ಯ ಕೇಶವ ಮರೋಳಿ, ಮಾಜಿ ಸದಸ್ಯ ಭಾಸ್ಕರ್ ರಾವ್, ಪದ್ಮನಾಭ್ ಅಮೀನ್, ಪದ್ಮನಾಭ್ ಪಣಿಕರ್, ಮಲ್ಯ ಪ್ರತಿಮೆಯ ರೂವಾರಿ ರಮೇಶ್ ಮಾಸ್ಟರ್ ಪುತ್ರಿ ಅನುರಾಧ ಶೆಟ್ಟಿ, ಸೊಸೆ ಪಲ್ಲವಿ ಶೆಟ್ಟಿ, ನವದುರ್ಗ ದೇವಳದ ಆಡಳಿತ ಮೊಕ್ತೇಸ ವಿಶ್ವನಾಥ್ ಭಟ್, ಸಮಿತಿಯ ಸಹ ಸಂಚಾಲಕರಾದ ನೀತು ಶರಣ್, ರಾಜೇಶ್ ದೇವಾಡಿಗ, ಇಂಬ್ರಾಹೀಂ ಕೋಡಿಜಾಲ್ , ಮೊಹಮ್ಮದ್ ಕುಂಜತ್ತಬೈಲ್, ಯೋಗೀಶ್ ನಾಯಕ್, ರವಿರಾಜ್ ಪೂಜಾರಿ, ರಿತೇಶ್ ಅಂಚನ್, ಹೊನಯ್ಯ , ಎ,ಸಿ ಜಯರಾಜ್, ದುರ್ಗ ಪ್ರಸಾದ್ , ಚಂದ್ರಪ್ಪ ಬಿ.ಕೆ, ಪ್ರೇಮ್ ಬಳ್ಳಾಲ್ ಭಾಗ್, ಉಷಾ ಶ್ರೀಕಾಂತ್, ಶಕುಂತಳಾ ಕಾಮತ್ , ವಿದ್ಯಾ ಶೆಣೈ, ಮಮತಾ ಕುಡ್ವ, ನಿರ್ಮಲಾ ಪೈ , ನಮೃತಾ ಪೈ , ಆಶಾ ನಾಯಕ್ , ರಮಣಿ , ಮೋಹಿನಿ.ಆರ್, ಅಮೀನ್, ಲೈಡಿಯ ಜೂಲಿಯೆಟ್, ಮೀನಾ ಟೆಲ್ಲಿಸ್, ಅನಿತಾ ಶಾಲೆಟ್ ಡಿಸೋಜ , ಮಲ್ಲಿಕಾ ಜಯರಾಜ್ ಮತ್ತಿತರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕಿ ಮಂಜುಳಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಮ.ನಾ.ಪ ಸದಸ್ಯ ಪ್ರಕಾಶ್.ಬಿ.ಸಾಲಿಯಾನ್ ವಂದಿಸಿದರು.