ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಲ್ಘರ್ ಜಿಲ್ಲೆಯ ವಸಾಯಿ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಸಂಯೋಜಕ, ಕಾರ್ಪೊರೇಟರ್ ನವೀನ್ ಡಿಸೋಜ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಒಂದು ಲಕ್ಷ ಷೇರು ಸಂಪತ್ತು ಹೊಂದಿರುವ ವಸಾಯಿ ಕ್ಷೇತ್ರದ ಪ್ರಸಿದ್ಧ ಬ್ಯಾಂಕ್ ಬೇಸಿನ್ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಗೆ ಎಐಸಿಸಿ ಸಂಯೋಜಕ ನವೀನ್ ಡಿಸೋಜ ನೇತೃತ್ವದ ನಿಯೋಗ ಕಾಂಗ್ರೆಸ್ ಅಭ್ಯರ್ಥಿ ವಿಜಯ ಪಾಟೆಲ್ ಅವರ ಜೊತೆ ಭೇಟಿ ನೀಡಿ ಬ್ಯಾಂಕಿನ ಸಾವಿರಾರು ಸಿಬ್ಬಂದಿ ಮತ್ತು ಗ್ರಾಹಕರ ಜೊತೆ ಮಾತುಕತೆ ನಡೆಸಿ ಮತಯಾಚನೆ ನಡೆಸಲಾಯಿತು.
ಈ ಸಂದರ್ಭ ವಸಾಯಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಒನಿಲ್ ಅಲ್ಮೆಡಾ, ಬ್ಯಾಂಕ್ ಅಧ್ಯಕ್ಷ ಬಿನೋಲ್ಡ್ ಡಯಾಸ್ ಸಹಿತ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.