ಮಂಗಳೂರು: ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಚೆಸ್ ತರಬೇತಿಗೆ ಇತ್ತೀಚಿಗೆ ಚಾಲನೆ ನೀಡಲಾಯಿತು.
ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾನಿ ಶರ್ಮಿಳ ಡಿಸೋಜ ಉಚಿತ ಚೆಸ್ ತರಬೇತಿಯನ್ನು ಉದ್ಘಾಟಿಸಿ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಸಂಸ್ಥೆ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಫೌಂಡೇಶನ್ ಟ್ರಸ್ಟಿಗಳಾದ ಗಣೇಶ್ ಕುಡ್ವ, ಅರುಣ್ ಬ್ಯಾಪ್ಟಿಸ್ಟ್, ಜನಿಫರ್ ಬರೆಟೋ, ತರಬೇತುದಾರರಾದ ಲೀರಾ ಡಿಸೋಜ, ಪರ್ಲ್ ಲೋಬೊ, ಸಂಸ್ಥೆಯ ಸದಸ್ಯರಾದ ಸತೀಶ್.ಎಂ ಕಿರಣ್, ಆಶಾ ನಾಯಕ್, ನೂರ್ ಜಹಾನ್, ವಿನ್ಸೆಂಟ್ ಅಲ್ಮೆಡ ಉಪಸ್ಥಿತರಿದ್ದರು.


