ಬಂಟ್ವಾಳ: ಸ್ವಾತಂತ್ರೋತ್ಸವದ ಪ್ರಯುಕ್ತ ಎಸ್ಕೆಎಸ್ಸೆಸೆಫ್ ವಿಖಾಯ ಮಾಣಿ ವಲಯದ ವತಿಯಿಂದ ಕೊಡಾಜೆ ಡಿಗ್ನಿಟಿ ಇಂಗ್ಲೀಷ್ ಮೀಡಿಯಂ ಶಾಲೆ ಹಾಗೂ ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಬೃಹತ್ ‘ರಕ್ತದಾನ ಶಿಬಿರ’ ಆ.11 ರಂದು ಬೆಳಿಗ್ಗೆ 9 ಗಂಟೆಗೆ ಕೊಡಾಜೆ ಡಿಗ್ನಿಟಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕೊಡಾಜೆ ಡಿಗ್ನಿಟಿ ಇಂಗ್ಲೀಷ್ ಮೀಡಿಯಂ ಶಾಲೆಯ ಅಧ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಉದ್ಘಾಟಿಸಲಿದ್ದು, ಎಸ್ಕೆಎಸ್ಸೆಸೆಫ್ ಮಾಣಿ ವಲಯ ಅಧ್ಯಕ್ಷ ಇಲ್ಯಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ದುಆ ಆಶೀರ್ವಚನ ನೀಡಲಿದ್ದಾರೆ. ವಿಖಾಯ ಮಾಣಿ ವಲಯ ಚೇರ್ ಮ್ಯಾನ್ ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟು ಸ್ವಾಗತಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಕೆಎಸ್ಸೆಸೆಫ್ ವಿಖಾಯ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್, ರಾಜ್ ಕಮಲ್ ಕಂಸ್ಟ್ರಕ್ಷನ್ ನ ಉಮ್ಮರ್ ಹಾಜಿ, ಕೊಡಾಜೆ ನೌಫಲ್ ಟಿಂಬರ್ಸ್ ನ ಅಶ್ರಫ್ ಹಾಜಿ, ಎಸ್ಕೆಎಸ್ಸೆಸೆಫ್ ದ.ಕ. ಈಸ್ಟ್ ಅಧ್ಯಕ್ಷ ಮುಹಮ್ಮದ್ ನವಮಿ ಮುಂಡೋಳೆ, ಎಸ್ಕೆಜೆಎಂ ಮಾಣಿ ರೇಂಜ್ ಅಧ್ಯಕ್ಷ ಮಜೀದ್ ದಾರಿಮಿ ಬುಡೋಳಿ, ಎಸ್ಕೆಎಸ್ಸೆಸೆಫ್ ದ.ಕ. ಈಸ್ಟ್ ಕೋಶಾಧಿಕಾರಿ ಜಮಾಲ್ ಕೋಡಪದವು, ಸತ್ತಿಕಲ್ಲು ಜೋಯ್ಸ್ ಬೀಡಿ ಮಾಲಕ ಉಮರಬ್ಬ, ಉದ್ಯಮಿಗಳಾದ ಸಿರಾಜ್ ಕುಕ್ಕರಬೆಟ್ಟು, ಅಹ್ಮದ್ ಹಾಜಿ ಕುಕ್ಕರಬೆಟ್ಟು, ಅಬ್ದುಲ್ ಖಾದರ್ ದರ್ಬಾರ್ ಪರ್ಲೋಟು, ಮಿತ್ತೂರು ಜುಮಾ ಮಸ್ಜಿದ್ ಅಧ್ಯಕ್ಷ ಸಲೀಂ ಹಾಜಿ, ಮಾಣಿ ರೇಂಜ್ ಮದ್ರಸ ಮ್ಯಾನೆಜ್ ಮೆಂಟ್ ಕಾರ್ಯುದರ್ಶಿ ಮುಹಮ್ಮದ್ ಸತ್ತಿಕಲ್ಲು, ಎಸ್ಕೆಎಸ್ಸೆಸೆಫ್ ಮಾಣಿ ಕ್ಲಸ್ಟರ್ ಅಧ್ಯಕ್ಷ ಮೂಸಾ ಕರೀಂ, ಗಡಿಯಾರ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಟಿಲ, ಕಲ್ಲಡ್ಕ ಕ್ಲಸ್ಟರ್ ಅಧ್ಯಕ್ಷ ನಿಹಾನ್, ಮಾಣಿ ವಲಯ ಪ್ರಧಾನ ಕಾರ್ಯದರ್ಶಿ ಜಾಬೀರ್ ಮುಬಶ್ಶಿರ್, ವಿಖಾಯ ದ.ಕ. ಈಸ್ಟ್ ಬ್ಲಡ್ ಉಸ್ತುವಾರಿ ಇಬ್ರಾಹೀಂ ಕಡಬ, ವಿಖಾಯ ದ.ಕ. ಈಸ್ಟ್ ಚೇರ್ ಮ್ಯಾನ್ ಅಶ್ರಫ್ ಶೇಡಿಗುಂಡಿ, ವಿಖಾಯ ದ.ಕ. ಈಸ್ಟ್ ಕನ್ವೀನರ್ ಅಬ್ದುಲ್ ಖಾದರ್ ಬಂಗೇರುಕಟ್ಟೆ, ಪಾಟ್ರಕೋಡಿ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹೀಂ ಬಾತಿಷ್, ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ, ಗಡಿಯಾರ್ ದುರ್ಗಾ ಕ್ಲೀನಿಕ್ ನ ಡಾ.ಮನೋಹರ್, ಮಾಣಿ ಗ್ರಾ.ಪಂ.ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಕೊಡಾಜೆ ಬಿಜೆಎಂ ಪ್ರಧಾನ ಕಾರ್ಯದರ್ಶಿ ನವಾಝ್ ಭಗವಂತಕೋಡಿ, ಮಾಣಿ ವಲಯ ಉಸ್ತುವಾರಿ ಸ್ವದಖತುಲ್ಲ ದಾರಿಮಿ ಕಕ್ಕಿಂಜೆ, ಎಸ್ಕೆಎಸ್ಸೆಸೆಫ್ ಕೊಡಾಜೆ-ನೇರಳಕಟ್ಟೆ ಶಾಖೆ ಅಧ್ಯಕ್ಷ ಹನೀಫ್ ಅನಂತಾಡಿ, ಉದ್ಯಮಿಗಳಾದ ರಶೀದ್ ನೀರಪಾದೆ, ಸಂಶುದ್ದೀನ್ ಪಟಿಲ, ಇಸ್ಮಾಯೀಲ್ ಸೂರಿಕುಮೇರು, ಗಡಿಯಾರ್ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಸೂರಿಕುಮೇರು ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ನೀರುಪಾದೆ ಜುಮಾ ಮಸೀದಿ ಅಧ್ಯಕ್ಷ ಫಾರೂಕ್, ಪೆರ್ಲಾಪು ಜುಮಾ ಮಸೀದಿ ಅಧ್ಯಕ್ಷ ನಝೀರ್ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.