ಮಂಗಳೂರು: ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜನ್ಮದಿನದ ಪ್ರಯುಕ್ತ ಇಂದಿರಾ ಗಾಂಧಿ ಜನ್ಮದಿನ ಆಚರಣಾ ಸಮಿತಿ ವತಿಯಿಂದ ನ.19 ರಂದು ಮಂಗಳೂರಿನಲ್ಲಿ ‘ಸೌಹಾರ್ದತಾ ನಡಿಗೆ’ ಹಮ್ಮಿಕೊಳ್ಳಲಾಗಿದೆ.
ಸೌಹಾರ್ದತಾ ನಡಿಗೆ ಅಂದು ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಹಾದ್ವಾರದಿಂದ ಪ್ರಾರಂಭವಾಗಿ ಮಣ್ಣಗುಡ್ಡೆ ಗುರ್ಜಿವರೆಗೆ ನಡೆಯಲಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ವಿಶ್ರಾಂತ ಸಹಪ್ರಾಧ್ಯಾಪಕ, ನಿರ್ದೇಶಕಿ ಡಾ.ಅನಿತಾ ರವಿಶಂಕರ್ ಹಾಗೂ ಸಾಮಾಜಿಕ ಕಾರ್ಯಕರ್ತ, ಚಿಂತಕ ಎಂ.ಜಿ.ಹೆಗ್ಡೆ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
