ಅಡ್ಡೂರು: ಪೊಳಲಿಯ ಅಸ್ಸೈಯದ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯ ಸ್ಥಾಪಕ ಅಶೈಖ್ ಹಝ್ರತ್ ಬಾಬಾ ಫಕ್ರುದ್ದೀನ್ ವಲಿಯುಲ್ಲಾಹಿ (ಖ.ಸಿ) ತಂಙಳ್ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಆಂಡ್ ನೇರ್ಚೆಯ ಕೊನೆಯ ದಿನವಾದ ಇಂದು ಮುಖ್ಯ ಪ್ರಭಾಷಣಕಾರರಾಗಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಭಾಗವಹಿಸಲಿದ್ದಾರೆ.
ಸಂಜೆ 7ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಪೊಳಲಿ ಬಿ.ಎಫ್.ಜೆ.ಎಂ ಖತೀಬ್ ಕೆ.ಎಂ.ಮುಹಮ್ಮದ್ ರಫೀಕ್ ಇಂಧಾದಿ ಉದ್ಘಾಟಿಸಲಿದ್ದು, ಬಿ.ಎಫ್.ಜೆ.ಎಂ ಅಧ್ಯಕ್ಷ ಮುಹಮ್ಮದ್ ಪೊಳಲಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯ್ದೀನ್ ಬಾವ, ನಿವೃತ್ತ ಪೊಲೀಸ್ ಉಪಆಯುಕ್ತ ಜಿ.ಎ.ಬಾವ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ 8ಕ್ಕೆ ಸಮಾರೋಪದ ಕೊನೆಯಲ್ಲಿ ಕೇರಳದ ಪತ್ತನಾಪುರಂ ಉಸ್ತಾದ್ ಅಲ್-ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಣಷಗೈಯ್ಯಲಿದ್ದಾರೆ.