ಪುತ್ತೂರು: ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕೆದಂಬಾಡಿ ಹಾಗೂ ಅರಿಯಡ್ಕ ಗ್ರಾಮ ಪಂಚಾಯತ್ ಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆ ಮೇರೆಗೆ ಪಕ್ಷದ ಉಸ್ತುವಾರಿಗಳನ್ನು ನೇಮಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಆದೇಶಿಸಿದ್ದಾರೆ.
ಉಸ್ತುವಾರಿಗಳು ಈ ಕೂಡಲೇ ಜವಬ್ದಾರಿಯನ್ನು ವಹಿಸಿಕೊಂಡು ಸ್ಥಳೀಯ ವಲಯ ಅಧ್ಯಕ್ಷರು ಮತ್ತು ನಾಯಕರ ಸಹಕಾರದೊಂದಿಗೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕೆದಂಬಾಡಿ ಗ್ರಾಮ ಪಂಚಾಯತ್: ಎ.ಕೆ ಜಯರಾಮ್ ರೈ, ರೋಶನ್ ರೈ ಬನ್ನೂರು, ಮನೋಹರ ಎಂಡೆಸಾಗು, ಅಬ್ದುಲ್ ಖಾದರ್ ಮೆರ್ಲ, ಹಬಿಬುಲ್ಲ ಕಣ್ಣೂರು, ಮುಕೇಶ್ ಕೆಮ್ಮಿಂಜೆ, ಹಂಝ ಎಲಿಯ ಅರಿಯಡ್ಕ ಗ್ರಾಮ ಪಂಚಾಯತ್: ಅಜೀಜ್ ಬುಶ್ರ, ದಿವ್ಯನಾಥ ಶೆಟ್ಟಿ, ವಸಂತ ಕುಮಾರ್ ರೈ, ಕೆ.ಎಂ. ಮಹಮ್ಮದ್ ಕುಂಞಿ,ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಬಾಬು ಮರಿಕೆ, ಮೌರಿಸ್ ಕುಟಿನ್ಹಾ ಅವರು ನೇಮಕಗೊಂಡಿದ್ದಾರೆ.
