Monday, December 23, 2024

ಸುರತ್ಕಲ್: ಮೋದಿ ಸ್ಕೀಮ್ ನಿಂದ 1 ಲಕ್ಷ ರೂ. ಕೊಡಿಸುವುದಾಗಿ ಮಹಿಳೆಗೆ ಚಿನ್ನದ ಬಳೆ ವಂಚನೆ

by eesamachara
0 comment

ಮಂಗಳೂರು: ಮೋದಿ ಸ್ಕೀಮ್ ನಲ್ಲಿ ಒಂದು ಲಕ್ಷ ರೂ. ಸಿಗುತ್ತದೆ ಎಂದು ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯೊಬ್ಬರಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಬಳೆಯನ್ನು ವಂಚಿಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಮಹಿಳೆಯನ್ನು ಮುಕ್ಕ ನಿವಾಸಿ ಲೀಲಾ ಎಂದು ಗುರುತಿಸಲಾಗಿದೆ.

ಘಟನಾ ವಿವರ: ನ.21ರಂದು ಲೀಲಾ ಅವರು ಮಧ್ಯಾಹ್ನ ಮುಕ್ಕ ಸತ್ಯ ಧರ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅಂದಾಜು 40 ವರ್ಷ ಪ್ರಾಯದ ಅಪರಿಚಿತ ಯುವಕ ತನ್ನನ್ನು ಸಂಬಂಧಿಕನೆಂಬ ನೆಪದಲ್ಲಿ ಮಾತನಾಡಿಸಿ ನಿಮ್ಮ ಮಗಳ ಗಂಡನ ಕಡೆಯವನೆಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮಾತುಕತೆಯಲ್ಲಿ ಮೋದಿಯ ಸ್ಕೀಮ್ ನಲ್ಲಿ “ನೀವು ಬ್ಯಾಂಕ್ ನಲ್ಲಿ 6 ಸಾವಿರ ರೂಪಾಯಿಗಳನ್ನು ಕಟ್ಟಿದರೆ, ನಿಮಗೆ ಒಂದು ಲಕ್ಷ ರೂಪಾಯಿ ಸಿಗುತ್ತದೆ. ಈಗ ಮಧ್ಯಾಹ್ನದ ಒಳಗಡೆ ಕಟ್ಟಬೇಕು, ಇವತ್ತು ಕೊನೆಯ ದಿನ. ನೀವು 6 ಸಾವಿರ ರೂಪಾಯಿ ಕೊಡಿ ನಾನು ಬ್ಯಾಂಕ್ ಗೆ ಕಟ್ಟಿ, ನಿಮಗೆ ಒಂದು ಲಕ್ಷ ರೂ. ತೆಗೆದು ಕೊಡುತ್ತೇನೆ” ಎಂದು ನಾಟಕವಾಡಿದ್ದಾನೆ.

ಮಹಿಳೆಯ ಬಳಿ ನಗದು ಹಣವಿಲ್ಲದೇ ಇದ್ದುದರಿಂದ ಆರೋಪಿಯು ಅವರ ಚಿನ್ನದ ಕೈ ಬಳೆಯನ್ನು ಪಡೆದುಕೊಂಡು, ಈ ಬಳೆಯನ್ನು ಮುಕ್ಕದ ಫೈನಾನ್ಸ್ವೊಂದರಲ್ಲಿ ಅಡವು ಇರಿಸಿ, ಅದರಲ್ಲಿ 6 ಸಾವಿರ ರೂ.ನಿಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ಕಟ್ಟಿ, ಒಂದು ಲಕ್ಷ ರೂ. ಮತ್ತು ಫೈನಾನ್ಸ್ ನಲ್ಲಿ ಅಡವು ಇರಿಸಿದ ಬಳೆಯನ್ನು ಬಿಡಿಸಿಕೊಂಡು ತಂದು ಕೊಡುತ್ತೇನೆ. ನೀವು ಮುಕ್ಕ ಕಾರ್ಪೋರೇಶನ್ ಬ್ಯಾಂಕಿನ ಬಳಿ ನಿಂತುಕೊಳ್ಳಿ. ನಾನು ಅದೇ ಬ್ಯಾಂಕಿನಲ್ಲಿ ಕೆಲಸದಲ್ಲಿ ಇರುವುದಾಗಿದೆ ಎಂದು ನಂಬಿಸಿದ್ದಾನೆ.

ಆತನ ಮಾತನ್ನು ನಂಬಿ ಮಹಿಳೆ ಸುಮಾರು ಒಂದು ಪವನ್ ತೂಕವಿರುವ ಸುಮಾರು 50 ಸಾವಿರ ಬೆಲೆ ಬಾಳುವ ಚಿನ್ನದ ಬಳೆ ಕೊಟ್ಟಿದ್ದಾರೆ. ಬಳಿಕ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಹಿಳೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios