122
ಮಂಗಳೂರು: 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾಳೆ (ಆ.15) ಬೆಳಿಗ್ಗೆ 9.15 ಉರ್ವ ಸ್ಟೋರ್ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿರಿಯ ಮುಖಂಡರು, ಮಾಜಿ ವಿಧಾನ ಪರಿಷತ್ ಶಾಸಕ ಮಹಮ್ಮದ್ ಮಸೂದ್ ಅವರು ಧ್ವಜಾರೋಹಣ ಗೈಯ್ಯಲಿದ್ದಾರೆ. ಬಳಿಕ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿರುವ ಪಕ್ಷದ 23 ಕಾರ್ಯಕರ್ತರ ಮಕ್ಕಳಿಗೆ ‘ವಿದ್ಯಾ ಪುರಸ್ಕಾರ’ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.