Monday, December 23, 2024

ಗೆದ್ದರೆ ಜನಾಧಿಕಾರ, ಸೋತರೆ EVM ಹ್ಯಾಕ್: ಕಾಂಗ್ರೆಸ್ ಗೆ ಕುಟುಕಿದ ಬಿಜೆಪಿ

by eesamachara
0 comment

ಬೆಂಗಳೂರು: “ಕರ್ನಾಟಕ, ತೆಲಂಗಾಣ, ಜಾರ್ಖಂಡ್‌ನಲ್ಲಿ ಇವಿಎಂ ಸರಿಯಿದೆ, ಮಹಾರಾಷ್ಟ್ರದಲ್ಲಿ ಸರಿಯಿಲ್ಲ!. ಇದು ಯಾವ ರೀತಿಯ ಲಾಜಿಕ್” ಎಂದು ಬಿಜೆಪಿ ಪ್ರಶ್ನಿಸಿದೆ.

ಬಹಳಷ್ಟು ಕಡೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲಾಗಿದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ವಾಗ್ದಾಳಿ ನಡೆಸಿದೆ.

“ಕಾಂಗ್ರೆಸ್ ಗೆದ್ದರೆ ಜನಾಧಿಕಾರ, ಸೋತರೆ ಇವಿಎಂ ಹ್ಯಾಕ್. ಚುನಾವಣೆ ಸೋತ ನಂತರ, ಆ ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಇನ್ನೂ ಮೈಗೂಡಿಸಿಕೊಳ್ಳದ ಕಾರಣ ಇಂದು ಕಾಂಗ್ರೆಸ್‌ನ ಪರಿಸ್ಥಿತಿ ಹೀನಾಯವಾಗಿದೆ” ಎಂದು ಟೀಕಿಸಿದೆ.

“ಇವಿಎಂ ಸುರಕ್ಷಿತ, ವಿಶ್ವಾಸಾರ್ಹ ಎಂದು ಸುಪ್ರೀಂ ಕೋರ್ಟ್‌ನಲ್ಲೂ ಸಾಬೀತಾಗಿದೆ. ಇವಿಎಂ ಹ್ಯಾಕ್ ಕುರಿತಂತೆ ಸಾಬೀತು ಪಡಿಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಸಹ ನೀಡಿತ್ತು. ಆಗ ಎಲ್ಲಿ ಹೋಗಿದ್ದಿರಿ ಪರಮೇಶ್ವರ ಅವರೇ? ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತಾವು ಗೆದ್ದಾಗ ಇವಿಎಂ ಕುರಿತು ಅನುಮಾನ ಬಂದಿಲ್ಲವೇ? ಆ ಗೆಲುವಿನ ಬಗ್ಗೆ ಅನುಮಾನವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ಎಂದು ಕುಟುಕಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios