Monday, December 23, 2024

ಜಸ್ಟ್‌ ಮಿಸ್‌! | ಇನ್ನೇನು ಚಿತೆಯಲ್ಲಿಟ್ಟು ಬೆಂಕಿ ಹಚ್ಚಬೇಕು ಎನ್ನುವಾಗ ಎದ್ದು ಕುಳಿತ ಸಾವನ್ನಪ್ಪಿದ ವ್ಯಕ್ತಿ!

by eesamachara
0 comment


ರಾಜಸ್ಥಾನ: ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದ ವ್ಯಕ್ತಿಯೊಬ್ಬರು ಶವ ಸಂಸ್ಕಾರದ ಅಂತಿಮ ಹಂತದ ವೇಳೆ ಎಚ್ಚೆತ್ತುಕೊಂಡ ಘಟನೆ ನಡೆದಿದೆ. ರಾಜಸ್ಥಾನದ ಜುನ್ ಜುನ್​ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರು ರೋಗಿಯನ್ನು ಪರೀಕ್ಷಿಸಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಹೀಗಾಗಿ ಆತನ ಶವವನ್ನು ಚಿತೆಯ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಏಕಾಏಕಿ ಎದ್ದು ಕುಳಿತು ಎಲ್ಲರಿಗೂ ಶಾಕ್​ ಕೊಟ್ಟಿದ್ದಾನೆ.

ಹೌದು, ಜುನ್ ಜುನ್ ಜಿಲ್ಲೆಯ 45 ವರ್ಷದ ರೋಹಿತಾಸ್ ಮೂಗ ಹಾಗೂ ಕಿವುಡನಾಗಿದ್ದ. ಒಂದು ದಿನ ರೋಹಿತಾಸ್​ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಬಿ.ಡಿ.ಕೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೋಹಿತಾಸ್​ನನ್ನು ಪರೀಕ್ಷಿಸಿದ ವೈದ್ಯರು ಈತ ಚಿಕಿತ್ಸೆ ಫಲಿಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಬಳಿಕ ಎರಡೂವರೆ ಗಂಟೆ ಕಾಲ ಶವವನ್ನು ಆಸ್ಪತ್ರೆಯ ಫ್ರೀಜರ್​ನಲ್ಲಿ ಇಡಲಾಗಿತ್ತು. ನಂತರ ಆತನ ಶವವನ್ನು ಮಾ ಸೇವಾ ಸಂಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.

ಅಲ್ಲದೇ ಪಂಚದೇವ ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಆತನ ಶವ ತೆಗೆದುಕೊಂಡು ಚಿತೆಯ ಮೇಲೆ ಇಡಲಾಗಿತ್ತು. ಚಿತೆಯ ಮೇಲಿದ್ದ ಆತನ ದೇಹದಲ್ಲಿ ಎದೆಯ ಏರಿಳಿತವನ್ನು ಜನರು ಗಮನಿಸಿದ್ದಾರೆ. ಇದರಿಂದಲೇ ರೋಹಿತಾಸ್ ಉಸಿರಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆ ಕೂಡಲೇ ಆತನನ್ನು ಬಿ.ಡಿ.ಕೆ. ಆಸ್ಪತ್ರೆಗೆ ರೋಹಿತಾಸ್ ಶಿಫ್ಟ್​ ಮಾಡಿದ್ದಾರೆ. ಇದಾದ ಬಳಿಕ ರೋಹಿತಾಸ್ ಪರೀಕ್ಷಿಸಿದ ವೈದ್ಯರು ಇನ್ನೂ ಈತ ಸತ್ತಿಲ್ಲ ಅಂತ ತಿಳಿಸಿದ್ದಾರೆ. ಐಸಿಯುಗೆ ದಾಖಲಿಸಿ ರೋಹಿತಾಸ್​ಗೆ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನೆಯ ಬಗ್ಗೆ ರಾಮವತಾರ್ ಮೀನಾ ಅವರು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದಲೂ ತನಿಖೆ ಮುಂದುವರೆದಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios