ಮಂಗಳೂರು: ದ.ಕ.ಜಿಲ್ಲೆಯ 9 ಗ್ರಾಮ ಪಂಚಾಯತ್ ಗಳ 30 ಸದಸ್ಯ ಸ್ಥಾನಗಳಿಗೆ ನ.23 ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಂಚಾಲಕರನ್ನು ನೇಮಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಸಂಚಾಲಕರಾಗಿ ಶುಭಾಷ್ಚಂದ್ರ ಶೆಟ್ಟಿ ಕೊಳ್ನಾಡು, ಸಹ ಸಂಚಾಲಕರಾಗಿ ಶಾಲೆಟ್ ಪಿಂಟೋ, ಸದಸ್ಯರಾಗಿ ಅಬ್ಬಾಸ್ ಅಲಿ, ವಿಶ್ವಾಸ್ ಕುಮಾರ್ ದಾಸ್, ವೃಂದ ಪೂಜಾರಿ ಅವರು ನೇಮಕಗೊಂಡಿದ್ದಾರೆ.
ಸಂಚಾಲಕರು ಆಯಾ ಸ್ಥಳೀಯ ನಾಯಕರು, ಮುಖಂಡರು, ಬ್ಲಾಕ್ ಅಧ್ಯಕ್ಷರುಗಳ ಸಹಕಾರದೊಂದಿಗೆ ಸಂಬಂಧಪಟ್ಟ ಬ್ಲಾಕ್ ವ್ಯಾಪ್ತಿಗಳಲ್ಲಿ ಚುನಾವಣೆ ಪಕ್ಷ ಬಲವರ್ಧನೆಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಧ್ಯಕ್ಷರು ಆದೇಶದಲ್ಲಿ ಸೂಚಿಸಿದ್ದಾರೆ.