ಮಂಗಳೂರು: ಕಾಂಗ್ರೆಸ್‌ನವರು ಮೃದು ಹಿಂದುತ್ವದಿಂದ ಹೊರಬರಬೇಕಿದೆ. ಹೊಂದಾಣಿಕೆ ರಾಜಕಾಯದಿಂದ ದೂರವಿರಬೇಕು. ಸಂವಿಧಾನವನ್ನು ಉಳಿಸಬೇಕಾದರೆ, ಅಂಬೇಡ್ಕರ್ ಜತೆಗೆ ನಮ್ಮ ಐಕಾನ್ ಗಳಾದ ಬುದ್ಧ, ಬಸವ, ನಾರಾಯಣಗುರು, ಕನಕ, ವಾಲ್ಮೀಕಿಯವರ ಸಿದ್ಧಾಂತಗಳನ್ನು ಒಪ್ಪುವವರು ನಾವು. ನಮ್ಮ ಸೈದ್ಧಾಂತಿಕ ಎದುರಾಳಿಗಳ ಸಿದ್ಧಾಂತಗಳನ್ನು ನಾವು ಧೈರ್ಯದಿಂದ ವಿರೋಧಿಸಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದ್ದಾರೆ.
ಮಂಗಳೂರು ನೆಹರೂ ವಿಚಾರ ವೇದಿಕೆ ವತಿಯಿಂದ ಉರ್ವಾಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
“ದ.ಕ. ಜಿಲ್ಲೆ ಬಹು ಸಂಸ್ಕೃತಿಯ ತೊಟ್ಟಿಲು, ಇದನ್ನು ಒಡೆದು ಮುರಿಯುವ ಯತ್ನ ನಡೆಸುತ್ತಿದೆ. ನಾವು ನೋಡುತ್ತಿದ್ದೇವೆ. ನೇರ ದಿಟ್ಟ ರಾಜ ಕಾರಣದಿಂದ ಒಂದಷ್ಟು ತೊಂದರೆ ಆಗಬಹುದು. ಆದರೆ, ಸಿದ್ಧಾಂತವನ್ನು ಬಲಿಕೊಡಬಾರದು. ಒಂದು ಸಿದ್ಧಾಂತವನ್ನು ಎದುರಿಸಲು ಅಥವಾ ಸೋಲಿಸಲು ಇನ್ನೊಂದು ಸಿದ್ಧಾಂತವನ್ನು ಹುಟ್ಟು ಹಾಕಬೇಕು. ಅದು ಕತ್ತಿ, ತ್ರಿಶೂಲಗಳಿಂದ ಆಗುವುದಿಲ್ಲ. ಬಿಜೆಪಿಯವರ ಸಿದ್ಧಾಂತ ಏನು ಎಂದರೆ ಅವರು ಹೇಳುತ್ತಾರೆ. ಅದೇ ರೀತಿ ಕಾಂಗ್ರೆಸ್‌ನವರು ತಮ್ಮ ಸಿದ್ಧಾಂತವನ್ನು ಹೇಳಬೇಕು. ಸಂವಿಧಾನದ ಅಸ್ತ್ರವನ್ನು ಎತ್ತಿ ಹಿಡಿಯಬೇಕು” ಎಂದು ಹೇಳಿದರು.
“ಭಾರತದಲ್ಲಿ ಸಂವಿಧಾನ ಅನುಷ್ಟಾನಕ್ಕೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಆದ್ದರಿಂದ ಸಂವಿಧಾನವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂಬುದನ್ನು ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಎದೆತಟ್ಟಿ ಹೇಳಬೇಕು ಮತ್ತು ಅದನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಬೇಕು. ಒಂದು ಸಿದ್ಧಾಂತವನ್ನು ಎದುರಿಸಲು ಅಥವಾ ಸೋಲಿಸಲು ಇನ್ನೊಂದು ಸಿದ್ಧಾಂತವನ್ನು ಹುಟ್ಟು ಹಾಕಬೇಕು. ಅದು ಕತ್ತಿ, ತ್ರಿಶೂಲಗಳಿಂದ ಆಗುವುದಿಲ್ಲ. ಬಿಜೆಪಿಯವರ ಸಿದ್ಧಾಂತ ಏನು ಎಂದರೆ ಅವರು ಹೇಳುತ್ತಾರೆ. ಅದೇ ರೀತಿ ಕಾಂಗ್ರೆಸ್‌ನವರು ತಮ್ಮ ಸಿದ್ಧಾಂತವನ್ನು ಹೇಳಬೇಕು. ಸಂವಿಧಾನದ ಅಸ್ತ್ರವನ್ನು ಎತ್ತಿ ಹಿಡಿಯಬೇಕು” ಎಂದರು.