ಹಾವೇರಿ: ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ ಎಂದು ಶಿಗ್ಗಾಂವಿ ಪರಾಜಿತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇವತ್ತು ಇಡೀ ಸರ್ಕಾರ ಬಂದು ಹಣದ ಹೊಳೆಯನ್ನೇ ಹರಿಸಿದೆ. ಹಾಗಾಗಿ ಇಂದು ಕಾಂಗ್ರೆಸ್ ಗೆದ್ದಿದೆ. ನಮ್ಮ ಸೋಲಿಗೆ ಕಾರಣ ಏನೆಂಬುವುದನ್ನು ಪಕ್ಷದ ಹಿರಿಯರು ಹಾಗೂ ಯುವಕರೆಲ್ಲ ಸೇರಿ ಅವಲೋಕನ ಮಾಡುತ್ತೇವೆ. ಈ ಬಗ್ಗೆ ಎಲ್ಲರೂ ಒಟ್ಟು ಸೇರಿ ಚರ್ಚಿಸುತ್ತೇವೆ” ಎಂದು ಹೇಳಿದರು.
“ನಾನು ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರಿಗೆ ಒಳಿತು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕ್ಷೇತ್ರದ ಜನರ ಜೊತೆಗೆ ಎಂದೆಂದಿಗೂ ಇರುತ್ತೇನೆ” ಎಂದರು.