ವಾಮಂಜೂರು: ಶ್ರೀ ಮಹಾಕಾಳಿ ಸೇವಾ ಆಡಳಿತ ಟ್ರಸ್ಟ್ (ರಿ.) ಹಾಗೂ ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ಕ್ಲಬ್ (ರಿ.) ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ನಾಳೆ (ಡಿ.22) ಇಲ್ಲಿನ ಸಂತೋಷ್ ನಗರದ ಕೇಂದ್ರ ಮೈದಾನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9:30 ರಿಂದ ನಡೆಯುವ ರಕ್ತದಾನ ಶಿಬಿರದ ಜೊತೆಗೆ ಫಳ್ನೀರ್ ಹೈಲಾಂಡ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಮತ್ತು ಮಂಗಳೂರು ಪ್ರಸಾದ್ ನೇತ್ರಾಲಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಕೂಡ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯಲಿ ಅಲಿ, ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಮ.ನ.ಪಾ ಸದಸ್ಯೆ ಹೇಮಲತಾ ರಘು ಸಾಲ್ಯಾನ್ ಹಾಗೂ ರಕ್ತದಾನ ಶಿಬಿರವನ್ನು ರಾಜ್ಯ ಸಿಪಿಎಂ ಸದಸ್ಯ ಮುನೀರ್ ಕಾಟಿಪಳ್ಳ ಉದ್ಘಾಟಿಸಲಿದ್ದಾರೆ.
ಮಹಾಕಾಳಿ ಅಮ್ಮನವರ ಕಟ್ಟೆಯ ಪ್ರಧಾನ ಅರ್ಚಕ ವೇಧಾಂತ ವಿಧ್ವಾನ್ ಸುರೇಶ್ ಬಾರಿತ್ತಾಯ, ಚೊಕ್ಕಬೆಟ್ಟು ಧರ್ಮಗುರು ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದ ಧರ್ಮಗುರು ಅತಿ ವಂದನೀಯ ಫಾ| ಜೇಮ್ಸ್ ಡಿಸೋಜ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್, ಹೈಲಾಂಡ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಯಾಸೀರ್ ಅಬ್ದುಲ್ಲಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ.ಹೆಗ್ಡೆ, ಮಂಗಳೂರು ಉತ್ತರ ಬಿಜೆಪಿ ಪ್ರಶಿಕ್ಷಣ ಪ್ರಕೋಪ ಸಂಚಾಲಕ ಪ್ರಶಾಂತ್ ಪೈ, ಖ್ಯಾತ ರಂಗಭೂಮಿ ಕಲಾವಿದ ಸತೀಶ್ ಬಂದಲೆ, ಹೈಲಾಂಡ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಮೊಹಮ್ಮದ್ ಯೂನುಸ್, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್, ಪಚ್ಚನಾಡಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಮಿನೇಜಸ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ಉದ್ಯಮಿ ನಯನಾ ಶೆಟ್ಟಿ, ಸಾಮಾಜಿಕ ಹೋರಾಟಗಾರ ಮೋಹನ್ ಪಚ್ಚನಾಡಿ, ರಾಜ್ಯ ಡಿವೈಎಫ್ ಐ ಕೋಶಾಧಿಕಾರಿ ಸಂತೋಷ್ ಬಜಾಲ್, ಡಿಸಿಸಿ ಕಾರ್ಯದರ್ಶಿ ಸಾರಿಕಾ ಪೂಜಾರಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವಕ್ತಾರ ಸುನೀಲ್ ಬಜಿಲಕೇರಿ, ತಿರುವೈಲ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ವಾಮಂಜೂರ್, ಶಿವಾಜಿನಗರ ಪಚ್ಚನಾಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಜಾರಾಮ್ ಭಟ್, ಶ್ರೀ ಮಹಾಕಾಳಿ ಸೇವಾ ಆಡಳಿತ ಟ್ರಸ್ಟ್ ಅಧ್ಯಕ್ಷ ವಸಂತ್ ಸಾಲ್ಯಾನ್, ಗೌರವಾಧ್ಯಕ್ಷರಾದ ರೊನಾಲ್ಡ್ ಡಿಸೋಜಾ, ಶಂಕರ್ ಶೆಟ್ಟಿ, ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ಕ್ಲಬ್ ಸಂಯೋಜಕ ಗೌತಮ್ ಬಂಗೇರ, ನಿರೂಪಕ ನಟರಾಜ್ ಪಚ್ಚನಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.