ಮಂಗಳೂರು: ಬರ್ಹoಪುರ ಓಡಿಶಾದಲ್ಲಿ ಸೋಮವಾರ ನಡೆದ ಅಸ್ಮಿತಾ ಖೇಲೋ ಇಂಡಿಯಾ-2025 ರಾಷ್ಟ್ರೀಯ ಮಹಿಳಾ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಜೂನಿಯರ್ಸ್ 81 ಕೆ.ಜಿ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಶ್ಮಿತಾ ಆಚಾರ್ಯ ಚಿನ್ನದ ಪದಕ ಮುಡಿಗೇರಿಸಿದ್ದಾರೆ.
ರಶ್ಮಿತಾ ಆಚಾರ್ಯ ನಗರದ ಆಕಾಶ ಭವನ ಕಾಪಿಗುಡ್ಡ ನಿವಾಸಿ ರೂಪ ಪ್ರಭಾಕರ್ ಆಚಾರ್ಯ ದಂಪತಿ ಪುತ್ರಿಯಾಗಿದ್ದು,ಬಲ್ಮಠದ ಸರ್ಕಾರಿ ಮಹಿಳಾ ಪಿಯು ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಪುಷ್ಪರಾಜ್ ಹೆಗಡೆ ಅವರಿಂದ ತರಬೇತಿ ಪಡೆದಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದಲ್ಲಿ ನಡೆದ ಖೇಲೋ ನ್ಯಾಷನಲ್ಸ್ ವೇಟ್ ಲಿಫ್ಟಿಯಿಂಗ್ ನಲ್ಲಿ 4ನೇ ಸ್ಥಾನ, ಮೈಸೂರಿನಲ್ಲಿ ನಡೆದ ದಾಸರ ವೇಟ್ ಲಿಫ್ಟಿಂಗ್ ಟೂರ್ನಮೆಂಟ್ ನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದಾರೆ.