ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ. ಪಠಾಣ ಬೆಂಬಲಿಸಿ, ನಾಮಪತ್ರ ವಾಪಸ್ ಪಡೆದು ಪ್ರಚಾರ ಕೈಗೊಂಡ ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಅಜ್ಜಂಪೀರ್ ಖಾದ್ರಿ ಕರೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಖಾದ್ರಿಗೆ ಶುಭಾಶಯ ಹೇಳಿದ್ದಾರೆ. “ಮತ ಏಣಿಕೆ ಮುಗಿತು ಸರ್, 13,000 ಲೀಡ್ ನಿಂದ ಪಠಾಣ್ ಗೆದ್ದಿದ್ದಾರೆ” ಎಂದು ಖಾದ್ರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ”ಖಾದ್ರಿ ನೀನು ಶ್ರಮಪಟ್ಟಿದ್ದು ಸಾರ್ಥಕವಾಗಿತು” ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅಜ್ಜಂಪೀರ್ ಖಾದ್ರಿ, ”ನಿಮಗಾಗಿ ಸರ್, ನಮ್ಮ ತಾಯಿಗಾಗಿ ತ್ಯಾಗ ಮಾಡಿದ್ದೇನೆ ಸರ್, ನೀವು ಸದಾ ನಗುತ್ತಾ ಇರಬೇಕು. ಅಷ್ಟು ಸಾಕು ಸರ್ ನನಗೆ” ಎಂದು ಎಂದು ಭಾವುಕರಾದರು. ”ನಿನಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗುತ್ತಿದ್ದಂತೆ, ಬಂಡಾಯ ಘೋಷಿಸಿ ಬಳಿಕ ನಾಮಪತ್ರ ವಾಪಸ್ ಪಡೆದಿದ್ದರು.