ಮಂಗಳೂರು: ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಭೆ ಶ್ರೀರಾಮ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯಲ್ಲಿ 2022-2025ರ ಎರಡನೇ ಅವಧಿಯ ಕಾರ್ಯ ಚಟುವಟಿಕೆಯ ಬಗ್ಗೆ ವರದಿ ಬಿಡುಗಡೆಗೊಳಿಸಲಾಯಿತು. ಬಳಿಕ ಮೂರನೇ ಅವಧಿಯ ಕಮಿಟಿಯ ರಚನೆಗೆ ಅವಕಾಶ ಮಾಡಿಕೊಡಲಾಯಿತು. ಅಧ್ಯಕ್ಷರಾಗಿ ಸುದರ್ಶನ್. ಕೆ ಅವರನ್ನು ಸರ್ವಾನುಮತದಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರುಗಳಾಗಿ ನಾಗೇಶ್. ಕೆ, ಲಕ್ಷ್ಮೀ ನಾರಾಯಣ ಶೆಟ್ಟಿ, ರಾಜೇಶ್ ದೇವಾಡಿಗ, ಜಗನ್ನಾಥ ಕರ್ಕೇರ, ಮೀರಾ, ಪ್ರಶಾಂತ್ ಆಳ್ವ, ಪ್ರಧಾನ ಸಲಹೆಗಾರರುಗಳಾಗಿ ಚಂದ್ರಾವತಿ ರೈ, ದೀಪಕ್ ಕೆ. ಪೂಜಾರಿ, ರಾಮ ಶೆಟ್ಟಿಗಾರ್, ಸಂದೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ಉಸ್ಮಾನ್, ಜೊತೆ ಕಾರ್ಯದರ್ಶಿಯಾಗಿ ರಾಜರಾಮ್, ಖಜಾಂಚಿಯಾಗಿ ಪ್ರತಿಭಾ ಶೆಟ್ಟಿ, ಲೆಕ್ಕ ಪರಿಶೋಧಕರಾಗಿ ಸುಪ್ರೀತ, ಕ್ರೀಡಾ ಕಾರ್ಯದರ್ಶಿಯಾಗಿ ಉಮೇಶ್ ಪೂಜಾರಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ವಿನಾಯಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕುಶಾಲಾಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೋಹಿಣಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜನಾರ್ಧನ್ ಶೆಟ್ಟಿಗಾರ್, ಸಂತೋಷ್, ರಾಜೇಶ್ ಆಚಾರ್ಯ, ರೇಣುಕಾ, ಸುನೀಲ್ ಅವರನ್ನು ನೇಮಿಸಲಾಯಿತು.