Friday, July 4, 2025

ಅಡ್ಡೂರು: ಹೂಳು ತುಂಬಿದ ಕೆಳಗಿನಕೆರೆ ರಸ್ತೆ; ಶ್ರಮದಾನ ಮೂಲಕ ತೆರವು

by eesamachara
0 comments

ಅಡ್ಡೂರು: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ವತಿಯಿಂದ ಇಲ್ಲಿನ ಕೆಳಗಿನಕೆರೆಯಿಂದ ಗೇಟ್ ಹೌಸ್ ವರೆಗಿನ ರಸ್ತೆಯಲ್ಲಿ ತುಂಬಿದ್ದ ಹೂಳನ್ನು ಶ್ರಮದಾನದ ಮೂಲಕ ರವಿವಾರ ತೆರವುಗೊಳಿಸಲಾಯಿತು.

ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿದು ಎರಡು ಬದಿಯಲ್ಲಿ ಮಣ್ಣು ತುಂಬಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್.ಸಿ.ಕೆ ಸದಸ್ಯರು ಹೂಳನ್ನು ತೆರವುಗೊಳಿಸಿ ಇಕ್ಕಲಗಳಲ್ಲಿ ಬೆಳುದು ನಿಂತ ಗಿಡಗಿಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.   

ಈ ಸಂದರ್ಭ ಎಫ್.ಸಿ.ಕೆ ಅಧ್ಯಕ್ಷ ಹಂಝ, ಮುಖಂಡರಾದ ಜಬ್ಬಾರ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಉಸ್ಮಾನ್, ಹಾರೀಸ್, ಸದ್ದೀಕ್, ಸಮೀರ್, ನೌಫಲ್, ಮುಸ್ತಫಾ ಅದ್ಯಪ್ಪಾಡಿ, ಅನ್ವೀಝ್, ಹರ್ಷಾದ್, ಆಶೀಕ್, ಅನ್ಸಾರ್, ಹಫೀಝ್, ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios