Saturday, April 19, 2025

ಅಡ್ಡೂರು: ಕಾಂಜಿಲಕೋಡಿ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿ ಉದ್ಘಾಟನೆ

by eesamachara
0 comment

ಅಡ್ಡೂರು:  ಇಲ್ಲಿನ ಕಾಂಜಿಲಕೋಡಿಯ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನವೀಕೃತ ಮಸೀದಿ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಅವರು ವಕ್ಫ್ ನಿರ್ವಹಣೆ ಮಾಡಿ ಖುತುಬಾ ನಿರ್ವಹಿಸಿದರು. ಇಬ್ರಾಹೀಂ ಬಾತಿಷಾ ತಂಙಳ್ ಜುಮಾ ನಮಾಝಿಗೆ ನೇತೃತ್ವ ನೀಡಿದರು. ಖತೀಬ್ ಯಾಕೂಬ್ ಫೈಝಿ ಸ್ವಾಗತಿಸಿದರು.

ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ಉಲೆಮಾಗಳ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಮನೋಭಾವವನ್ನು ಯುವ ಜನಾಂಗ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣದ ಜವಾಬ್ದಾರಿ ಯುವಕರ ಮೇಲಿದೆ. ಈ ನಿಟ್ಟಿನಲ್ಲಿ ಯುವಕರು ಸಮುದಾಯದ ಸೇವಾ ಕಾರ್ಯಗಳಲ್ಲಿ ತಮ್ಮಷ್ಟು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು, ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಹಾಜಿ ಶಾಹುಲ್ ಹಮೀದ್ ಮೆಟ್ರೊ, ಅಡ್ಡೂರು ಬಿ.ಜೆ.ಎಂ ಉಪಾಧ್ಯಕ್ಷ ಎ.ಕೆ.ಅಶ್ರಫ್, ರಫೀಕ್ ಹುದವಿ, ಬದ್ರುದ್ದೀನ್ ಅಝ್ಹರಿ, ಹಾಜಿ ಇಸ್ಮಾಯೀಲ್ ಗೇಟ್ ಹೌಸ್, ಬಂಗ್ಲಗುಡ್ಡೆ ಸೈಟ್ ಬಿ.ಜೆ.ಎಂ ಅಧ್ಯಕ್ಷ ದಾವೂದ್ ಬಂಗ್ಲಗುಡ್ಡೆ, ಜಮಾಅತ್ ಕಾರ್ಯದರ್ಶಿಗಾಳದ ಶರೀಫ್ ಪೊನ್ನೆಲ, ನೌಫಲ್ ಕೋಡಿಬೆಟ್ಟು, ಜೊತೆ ಕಾರ್ಯದರ್ಶಿ ಮೊಹಮ್ಮದ್ ಕುಂಞಿ ಮಾಸ್ಟರ್, ಪ್ರಮುಖರಾದ ಇಬ್ರಾಹೀಂ ಬೊಟ್ಟಿಕೆರೆ, ಲತೀಫ್ ಸಿ.ಎಂ, ಎ.ಕೆ.ರಿಯಾಝ್, ಇಕ್ಬಾಲ್, ಎ.ಕೆ.ಆರಿಸ್,  ಮೊಹಮ್ಮದ್ ಶಮೀರ್ ನೂಯಿ, ಹಸನ್ ಪೊನ್ನೆಲ, ಕಮಲ್ ಕಾಂಜಿಲಕೋಡಿ, ಎ.ಕೆ.ಮುಸ್ತಫಾ, ಸಾಹುಲ್ ಹಮೀದ್ ನೂಯಿ, ರಹೀಂ ಪ್ರಕಾಶ್ ಬೀಡಿ, ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ತಫಾ ಹನೀಫಿ, ಶರೀಫ್ ಅರ್ಶದಿ ಮತ್ತಿತರರು ಉಪಸ್ಥಿತರಿದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios