ಗುರುಪುರ-ಕೈಕಂಬ: ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಗ್ರಾಮ ಸಮಿತಿ ವತಿಯಿಂದ ಅಡ್ಡೂರು ಜಂಕ್ಷನ್ ನಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪ್ರತಿಭಟನಾನಿರತರು ವಕ್ಫ್ ಪರ ಭಿತ್ತಿಪತ್ರ ಪ್ರದರ್ಶಿಸಿ ವಕ್ಫ್ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಹಾಗೂ ಮುಸ್ಲಿಂ ವಿರೋಧಿ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಎಸ್ ಡಿಪಿಐ ಗ್ರಾಮ ಸಮಿತಿಯ ಉಪಾಧ್ಯಕ್ಷ ಎ.ಕೆ ಮುಸ್ತಫಾ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಇಮ್ತಿಯಾಜ್ ಅಡ್ಡೂರು, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್, ಮೊಹಮ್ಮದ್ ಅಶ್ರಫ್, ಮನ್ಸೂರ್ ಟಿಬೆಟ್, ಶಾಹಿಕ್ ಪಾಂಡೇಲ್, ಮುಖಂಡ ಸಲಾಂ ಗೋಳಿಪಡ್ಫು ಮತ್ತಿತರರು ಉಪಸ್ಥಿತರಿದ್ದರು.


