ಮೂಡಬಿದ್ರೆ: ನೌಷಾದ್ ಹಾಜಿ ಸುರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.), ದಾರುಸ್ಸಲಾಂ ಎಜುಕೇಷನ್ ಸೆಂಟರ್ ಹಾಗೂ ಬೆಳ್ತಂಗಡಿ ಖಿಲ್ರ್ ಜುಮಾ ಮಸ್ಜಿದ್ ಇದರ ಸಹಯೋಗದಲ್ಲಿ ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿ ಅವರ ಸ್ಮರಣಾರ್ಥ ಫೆ.24ರಂದು ಬೆಳ್ತಂಗಡಿಯ ದಾರುಸ್ಸಲಾಂ ಕ್ಯಾಂಪಸ್ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ದುಆ ಮಜ್ಲಿಸ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
