ಅಡ್ಡೂರು: ಹೆಲ್ಪಿಂಗ್ ಹ್ಯಾಂಡ್ಸ್ ಮಂಜೊಟ್ಟಿ ಇದರ ವಾರ್ಷಿಕ ಮಹಾಸಭೆಯು ರಝಾಕ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ಮಂಜೊಟ್ಟಿಯಲ್ಲಿ ಜರಗಿತು.
ಈ ವೇಳೆ 2025-2026ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹೆಲ್ಪಿಂಗ್ ಹ್ಯಾಂಡ್ಸ್ ಮಂಜೊಟ್ಟಿ ಸಂಸ್ಥೆಯ ಗೌರವಾಧ್ಯಕ್ಷರಾಗಿ ನೌಫಲ್ ಗೋಳಿಪಡ್ಪು, ಅಧ್ಯಕ್ಷರಾಗಿ ಮನ್ಸೂರ್ ಮಣ್ಣಗುಡ್ಡೆ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶಾಹುಲ್ ಅಗರ್, ರಿಯಾಝ್ ಪಾಂಡೇಲ್, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಎಸ್.ಬಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಶಾಹಿಕ್ ಪಾಂಡೇಲ್, ಕೋಶಾಧಿಕಾರಿಯಾಗಿ ಮಸೂದ್ ಅಗರ್, ಲೆಕ್ಕ ಪರಿಶೋಧಕರಾಗಿ ಇಮ್ತಿಯಾಝ್ ಮಣ್ಣಗುಡ್ಡೆ, ಸಲಹೆಗಾರರಾಗಿ ಶರೀಫ್ ಅಗರ್, ಜುನೈದ್ ಮಣ್ಣಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಸೈನಾರ್ ಮಂಜೊಟ್ಟಿ, ಅನ್ಸಾರ್ ಅಗರ್, ಅಕ್ಬರ್ ಮಣ್ಣಗುಡ್ಡೆ, ಅನ್ಸಾರ್ ಪಾಂಡೇಲ್, ಇಸ್ಮಾಯೀಲ್ ಅಗರ್ ಹಾಗೂ ಮಜೀದ್ ಅವರನ್ನು ನೇಮಕ ಮಾಡಲಾಯಿತು.