ಅಡ್ಡೂರು: ಅಡ್ಡೂರು ಬದ್ರಿಯಾ ಕೇಂದ್ರ ಜುಮಾ ಮಸೀದಿ ವತಿಯಿಂದ ಡಿ.26ರಿಂದ ಡಿ.28ರ ವರೆಗೆ ಸ್ವಲಾತ್ ವಾರ್ಷಿಕ, ಧಾರ್ಮಿಕ ಪ್ರಭಾಷಣ ಹಾಗೂ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಮಗ್ರಿಬ್ ನಮಾಝ್ ಬಳಿಕ ಇಲ್ಲಿನ ಬಿ.ಜೆ.ಎಂ ವಠಾರದಲ್ಲಿ ನಡೆಯಲಿದೆ.
ಇಂದು (ಡಿ.26) ಜರಗುವ ಸ್ವಲಾತ್ ವಾರ್ಷಿಕ ಕಾರ್ಯಕ್ರಮವನ್ನು ಶೈಖುನಾ ಬೊಳ್ಳೂರ್ ಉಸ್ತಾದ್ ಅವರು ಉದ್ಘಾಟಿಸಲಿದ್ದು, ಅಡ್ಡೂರು ಬಿ.ಜೆ.ಎಂ ಖತೀಬ್ ಸ್ವದಖತುಲ್ಲಾ ಫೈಝಿ ನೇತೃತ್ವ ನೀಡಲಿದ್ದಾರೆ. ಸೈಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಆತೂರು ಅವರು ದುವಾ ನೆರವೇರಿಸಲಿದ್ದು, ಬಿ.ಜೆ.ಎಂ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಡ್ಡೂರು ಜಂಕ್ಷನ್ ಮಸೀದಿಯ ಖತೀಬ್ ಜಾಬಿರ್ ಫೈಝಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ.
ಡಿ.27ರಂದು ನಡೆಯುವ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವನ್ನು ದ.ಕ.ಜಿಲ್ಲೆಯ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಉದ್ಘಾಟಿಸಲಿದ್ದಾರೆ. ಅಬೂಬಕ್ಕರ್ ಹುದವಿ ಮುಂಡಂಪರಂಬು ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉಪಸ್ಥಿತರಿರಲಿದ್ದಾರೆ.
ಡಿ.28ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಅವರು ಉದ್ಘಾಟಿಸಲಿದ್ದು, ಉಸ್ತಾದ್ ವಲಿಯುದ್ದೀನ್ ಫೈಝಿ ನೇತೃತ್ವ ನೀಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಅವರು ದುವಾ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
