Saturday, April 19, 2025

ಗಮನಕ್ಕೆ: SSLC ಅಂಕಪಟ್ಟಿ ತಿದ್ದುಪಡಿಗೆ ನ. 20 ಕೊನೇ ದಿನ

by eesamachara
0 comment
sslc karnataka borad

ಬೆಂಗಳೂರು: 2024ನೇ ಸಾಲಿನ ಎಸೆಸೆಲ್ಸಿ  ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿಕೊಳ್ಳಲು ನ.20ರವರೆಗೆ ಅವಕಾಶ ನೀಡಲಾಗಿದೆ.

ಅಂಕಪಟ್ಟಿಗಳನ್ನು ಮುದ್ರಿಸಿ ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗಿದ್ದು, ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ, ತಂದೆ-ತಾಯಿ ಹೆಸರು ಸೇರಿ ತಪ್ಪಾಗಿ ಮುದ್ರಣವಾಗಿದ್ದಲ್ಲಿ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ. ಅಂತಹ ಅಂಕಪಟ್ಟಿಯನ್ನು ಮಂಡಳಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಮತ್ತೊಂದು ಅಂಕಪಟ್ಟಿಯನ್ನು ಪಡೆಯಬೇಕು ಹಾಗೂ ಅಂಕಪಟ್ಟಿ ಹರಿದಿದ್ದಲ್ಲಿ ಅಥವಾ ಮುದ್ರಣದಲ್ಲಿ ದೋಷವಿದ್ದಲ್ಲಿ ಅಥವಾ ಭಾವಚಿತ್ರ ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಲ್ಲಿ ತಡಮಾಡದೆ ಅಂಕಪಟ್ಟಿ ಸ್ವೀಕರಿಸಿದ 5 ದಿನದೊಳಗೆ ಹೊಸ ಅಂಕಪಟ್ಟಿಯನ್ನು ಪಡೆಯಲು ಪ್ರಸ್ತಾವನೆಯೊಂದಿಗೆ ಮೂಲ ಅಂಕಪಟ್ಟಿಯನ್ನು ಲಗತ್ತಿಸಿ ಕಳುಹಿಸಬೇಕು ಎಂದು  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸೂಚಿಸಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios