ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನಾಳೆ (ನ.10) ನೀವಿಯಸ್ ಮಂಗಳೂರು ಮ್ಯಾರಥಾನ್ ಓಟ ಆಯೋಜಿಸಿದ ಹಿನ್ನೆಲೆಯಲ್ಲಿ ನಗರದ ಹಲವೆಡೆ ವಾಹನ ಸಂಚಾರ, ನಿಲುಗಡೆ ನಿಷೇಧ ಮಾಡಿ, ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಮ್ಯಾರಥಾನ್ ಓಟದಲ್ಲಿ ಸುಮಾರು 5000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿರುವುದರಿಂದ ಮುಂಜಾನೆ 4 ರಿಂದ ಬೆಳಗ್ಗೆ 10 ರ ತನಕ ಮಂಗಳೂರು ನಗರದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮ್ಯಾರಥಾನ್ ಓಟವು ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್), ಚಿಲಿಂಬಿ, ಉರ್ವಸ್ಟೋರ್, ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆಐಒಸಿಎಲ್ ಜಂಕ್ಷನ್ ಮೂಲಕ ಎನ್‌ಎಂಪಿಎ ಸರ್ವಿಸ್ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್‌ನಲ್ಲಿ ಪಣಂಬೂರು ಬೀಚ್ ರಸ್ತೆಗೆ ತಿರುಗಿ ವಾಪಸ್ ಡಿಕ್ಸಿ ಕ್ರಾಸ್, ಕೆಐಓಸಿಎಲ್ ಜಂಕ್ಷನ್‌ಗೆ ಬಂದು ತಣ್ಣೀರುಬಾವಿ ಬೀಚ್ ವರೆಗೆ ಹೋಗಿ ವಾಪಸ್ ಕೊಟ್ಟಾರ ಚೌಕಿ, ಲೇಡಿಹಿಲ್ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.
ಎಲ್ಲೆಲ್ಲಿ?: 1) ಮಣ್ಣಗುಡ್ಡೆ ಕಡೆಯಿಂದ ನಾರಾಯಣ ಗುರು ವೃತ್ತ(ಲೇಡಿಹಿಲ್)ದ ಕಡೆಗೆ ಎಲ್ಲ ತರಹದ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ. 2) ಉರ್ವ ಮಾರ್ಕೆಟ್‌ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಎಲ್ಲತರಹದ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 3) ಕೆಎಸ್‌ಆರ್‌ಟಿಸಿಯಿಂದ ಲಾಲ್‌ಬಾಗ್ ಮೂಲಕ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಎಲ್ಲತರಹದ ವಾಹನ ಸಂಚಾರ ನಿಷೇಧಿಸಿದೆ. 4) ನಾರಾಯಣ ಗುರು ವೃತ್ತ (ಲೇಡಿಹಿಲ್)ದಿಂದ ಕೊಟ್ಟಾರಚೌಕಿವರೆಗಿನ ರಸ್ತೆಯಲ್ಲಿವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 5) ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕ್ರಾಸ್ ಕಡೆಗೆ ಸಾಗುವ ಸರ್ವಿಸ್ ರಸ್ತೆಯಲ್ಲಿಎಲ್ಲ ತರಹದ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 6) ಕೋಡಿಕಲ್ ಕ್ರಾಸ್‌ನಿಂದ ಕೂಳೂರು ಹೊಸ ಸೇತುವೆ ವರೆಗೆ ಎಲ್ಲ ತರಹದ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 7) ತಣ್ಣೀರುಬಾವಿ ಬಾವಿ ಬೀಚ್ ರಸ್ತೆಯಲ್ಲಿ ತಣ್ಣೀರುಬಾವಿ ಬೀಚ್ ವರೆಗೆ ಎಲ್ಲತರಹದ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 8) ಮ್ಯಾರಥಾನ್ ಸಾಗುವ ಮಾರ್ಗದಲ್ಲಿನ ಎಡ ಭಾಗದಲ್ಲಿರುವ ಎಲ್ಲ ಅಡ್ಡ ರಸ್ತೆಗಳಿಂದ ವಾಹನಗಳು ಮಾರಥಾನ್ ಓಟ ಸಾಗುವ ಮುಖ್ಯ ರಸ್ತೆಗೆ ಬರುವುದನ್ನು ನಿಷೇಧಿಸಿದಲಾಗಿದೆ.