ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುದ್ಮುಲ್ ರಂಗರಾವ್ ಪೀಠ ಹಾಗೂ ಜಯಂತಿ ಆಚರಣೆ ಮಾಡಬೇಕು ಎಂದು ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ ಆಗ್ರಹಿಸಿದ್ದಾರೆ.
ಸಮಾಜ ಸುಧಾರಕ ದೀನ ದಲಿತರ ಪಾಲಿನ ದೇವತಾ ಮನುಷ್ಯ, 19ನೇ ಶತಮಾನದಲ್ಲಿ ಬಡ ಹಿಂದುಳಿದ ಸಮಾಜಕ್ಕೆ ಭೂ ಧಾನ, ವಿದ್ಯಾದಾನದ ಮೂಲಕ ಅಸಂಖ್ಯ ಹಿಂದುಳಿದ ಸಮಾಜಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟು ಅವರ ಜೀವನಕ್ಕೆ ಆಸರೆಯಾದ ಕುದ್ಮುಲ್ ರಂಗರಾವ್ ರವರ ಪೀಠ ಹಾಗೂ ಅವರ ಜಯಂತಿ ಆಚರಣೆಯನ್ನು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ನಡೆಸಬೇಕು ಎಂದು ರಘುರಾಜ್ ಕದ್ರಿ ಒತ್ತಾಯಿಸಿದ್ದಾರೆ.