Saturday, April 19, 2025

SSLC results ಪ್ರಕಟ| ಬಾಲಕಿಯರು, ಗ್ರಾಮೀಣ ಮಕ್ಕಳೇ ಮೈಲುಗೈ

ಉಡುಪಿಗೆ ಪ್ರಥಮ ಸ್ಥಾನ, ದ.ಕ. ಜಿಲ್ಲೆ ದ್ವಿತೀಯ, ಯಾದಗಿರಿಗೆ ಕೊನೆಯ ಸ್ಥಾನ

by eesamachara
0 comment

ಬೆಂಗಳೂರು: ಇಂದು 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶೇ. 81.11 ಬಾಲಕಿಯರು ಹಾಗೂ ಶೇ. 65.90 ಬಾಲಕರು ಉತ್ತೀರ್ಣರಾಗಿದ್ದಾರೆ.

2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ-1ರಲ್ಲಿ 441910 ಬಾಲಕರು, 428058 ಬಾಲಕಿಯರು ಸೇರಿದಂತೆ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್​​ ಆಗಿದ್ದು, ಈ ಬಾರಿ ರಾಜ್ಯಾದ್ಯಂತ ಶೇ. 73.40ರಷ್ಟು ಫಲಿತಾಂಶ ಬಂದಿದೆ. ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.4 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.

ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು, ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಯಾದಗಿರಿ (50.59%) ಜಿಲ್ಲೆ ಗಳಿಸಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

ಜಿಲ್ಲಾವಾರು ಫಲಿತಾಂಶ

  • ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ (94%) ಫಲಿತಾಂಶ
  • ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ (92.12%)
  • ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ (88.67%)
  • ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ (88.67%)
  • ಉತ್ತರ ಕನ್ನಡ ಜಿಲ್ಲೆಗೆ ಐದನೇ ಸ್ಥಾನ (86.54%)
  • ಹಾಸನ ಜಿಲ್ಲೆಗೆ ಆರನೇ ಸ್ಥಾನ (86.28%)
  • ಮೈಸೂರು ಜಿಲ್ಲೆಗೆ ಏಳನೇ ಸ್ಥಾನ (85.5%)
  • ಶಿರಸಿ ಜಿಲ್ಲೆಗೆ ಎಂಟನೇ ಸ್ಥಾನ (84.64%)
  • ಬೆಂಗಳೂರು ಗ್ರಾ ಜಿಲ್ಲೆಗೆ ಒಂಬ್ತತೇ ಸ್ಥಾನ (83.67%)
  • ಚಿಕ್ಕಮಗಳೂರು ಜಿಲ್ಲೆಗೆ ಹತ್ತನೇ ಸ್ಥಾನ (83.39%)
  • ವಿಜಯಪುರ ಜಿಲ್ಲೆಗೆ 11ನೇ ಸ್ಥಾನ (79.82%)
  • ಬೆಂಗಳೂರು ದಕ್ಷಿಣ ಜಿಲ್ಲೆಗೆ 12ನೇ ಸ್ಥಾನ (79%)
  • ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ (77.92%)
  • ಬೆಂಗಳೂರು ಉತ್ತರ ಜಿಲ್ಲೆಗೆ 14ನೇ ಸ್ಥಾನ (77.09%)
  • ಹಾವೇರಿ ಜಿಲ್ಲೆಗೆ 15ನೇ ಸ್ಥಾನ (75.85%)
  • ತುಮಕೂರು ಜಿಲ್ಲೆಗೆ 16ನೇ ಸ್ಥಾನ (75.16%)
  • ಗದಗ ಜಿಲ್ಲೆಗೆ 17ನೇ ಸ್ಥಾನ (74.76%)
  • ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ (73.61%)
  • ಮಂಡ್ಯ ಜಿಲ್ಲೆಗೆ 19ನೇ ಸ್ಥಾನ (73.59%)
  • ಕೋಲಾರ ಜಿಲ್ಲೆಗೆ 20ನೇ ಸ್ಥಾನ (73.57%)
  • ಚಿತ್ರದುರ್ಗ ಜಿಲ್ಲೆಗೆ 21ನೇ ಸ್ಥಾನ (72.85%)
  • ಧಾರವಾಡ ಜಿಲ್ಲೆಗೆ 22ನೇ ಸ್ಥಾನ (72.67%)
  • ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ (72.49%)
  • ಚಾಮರಾಜನಗರ ಜಿಲ್ಲೆಗೆ 24ನೇ ಸ್ಥಾನ (71.59%)
  • ಚಿಕ್ಕೋಡಿ ಜಿಲ್ಲೆಗೆ 25ನೇ ಸ್ಥಾನ (69.82%)
  • ರಾಮನಗರ ಜಿಲ್ಲೆಗೆ 26ನೇ ಸ್ಥಾನ (69.53%)
  • ವಿಜಯನಗರ ಜಿಲ್ಲೆಗೆ 27ನೇ ಸ್ಥಾನ (65.61%)
  • ಬಳ್ಳಾರಿ ಜಿಲ್ಲೆಗೆ 28ನೇ ಸ್ಥಾನ ಸಿಕ್ಕಿದೆ (64.99%)
  • ಬೆಳಗಾವಿ ಜಿಲ್ಲೆಗೆ 29ನೇ ಸ್ಥಾನ (64.93%)
  • ಮಧುಗಿರಿ ಜಿಲ್ಲೆಗೆ 30ನೇ ಸ್ಥಾನ (62.44%)
  • ರಾಯಚೂರು ಜಿಲ್ಲೆಗೆ 31ನೇ ಸ್ಥಾನ (61.2%)
  • ಕೊಪ್ಪಳ ಜಿಲ್ಲೆಗೆ 32ನೇ ಸ್ಥಾನ (61.16%)
  • ಬೀದರ್ ಜಿಲ್ಲೆಗೆ 33ನೇ ಸ್ಥಾನ (57.52%)
  • ಕಲಬುರಗಿ ಜಿಲ್ಲೆಗೆ 34ನೇ ಸ್ಥಾನ (53.04%)
  • SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ 50.59%

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios