ಮಂಗಳೂರು: ಸಾಮಾಜಿಕ ಕಾರ್ಯಕರ್ತ ಗುರುಪುರದ ಅಬ್ದುಲ್ ಲತೀಫ್ ನೇತೃತ್ವದ ANI ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಚಿತ ಹತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉಚ್ಚಿಲದ ಸೋಮೇಶ್ವರ ಕಿಯಂಝಾ ಗಾರ್ಡನ್ ನಲ್ಲಿ ನಡೆಯಲಿದೆ.
ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇರಳದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾದ ಬೋಬಿ ಚೆಮ್ಮನ್ನೂರ್, ಫಿರೋಝ್ ಕುನ್ನುಂಪರಂಬಿಲ್ ಸೇರಿದಂತೆ ಹಲವು ಉಲಮಾ, ಉಮರಾ ಶಿರೋಮಣಿಗಳು ಭಾಗವಹಿಸಲಿದ್ದಾರೆ. 5:30ಕ್ಕೆ ನಿಖಾಹ್ ಕಾರ್ಯಕ್ರಮ ಜರುಗಲಿದೆ. ನಂತರ ಮಗ್ರಿಬ್ ನಮಾಝಿನ ಬಳಿಕ ದಫ್ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲತೀಫ್ ಗುರುಪುರ ಅವರು ಹಲವಾರು ಕಾರುಣ್ಯ ಸೇವೆ ಮಾಡುತ್ತಿದ್ದು, ಇತ್ತೀಚೆಗೆ ಅವರು ಸೂರಿಲ್ಲದವರಿಗೆ ಆಸರೆ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಡುತ್ತಿದ್ದಾರೆ.