ಗುರುಪುರ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಲೋಕಸಭಾ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯತ್ ನ ನೀರುಮಾರ್ಗ ಕ್ಷೇತ್ರದಿಂದ ಸುರೇಂದ್ರ ಕಂಬಳಿ, ಬಿ.ಎಲ್. ಪದ್ಮನಾಭ ಕೋಟ್ಯಾನ್, ಮೆಲ್ವಿನ್ ಡಿಸೋಜ, ಯೂಸುಫ್ ಉಳಾಯಿಬೆಟ್ಟು, ಗುರುಪುರ ಕ್ಷೇತ್ರದಿಂದ ಯು.ಪಿ. ಇಬ್ರಾಹೀಂ, ಸುನೀಲ್ ಗಂಜೀಮಠ, ಅಬ್ದುಲ್ ಅಝೀಝ್ ಬಾಷಾ, ಎಡಪದವು ಕ್ಷೇತ್ರದಿಂದ ಆರ್.ಕೆ. ಪೃಥ್ವಿರಾಜ್, ಕೃಷ್ಣ ಅಮೀನ್, ಗಿರೀಶ್ ಆಳ್ವ ಹಾಗೂ ಹರಿಯಪ್ಪ ಮುತ್ತೂರು ಅವರು ನೇಮಕಗೊಂಡಿದ್ದಾರೆ.