ಬಂಟ್ವಾಳ: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬೇಬಿ ಕುಂದರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬೇಬಿ ಕುಂದರ್ ಅವರು 1985-86ರ ಅವಧಿಯಲ್ಲಿ ಎಸ್.ವಿ.ಎಸ್ ಕಾಲೇಜ್ ನಲ್ಲಿ ಎನ್.ಎಸ್.ಯು.ಐ ಅಧ್ಯಕ್ಷರಾಗಿ ಸಕ್ರೀಯರಾಗಿದ್ದರು. 31 ವರ್ಷಗಳ ಕಾಲ ವಿಜಯ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದು, 12 ವರ್ಷಗಳ ಕಾಲ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಬಳಿಕ ಬ್ಯಾಂಕ್ ನಿಂದ ನಿವೃತ್ತಿ ಪಡೆದು ಸಕ್ರೀಯ ರಾಜಕೀಯಕ್ಕೆ ಬಂದರು. ಪ್ರಸ್ತುತ ಅವರು 5 ವರ್ಷಗಳಿಂದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಬೂಡಾ ಸದಸ್ಯರಾಗಿ ಮನೋಹರ ಕುಲಾಲ್ ನೇರಂಬೋಳು, ಹರೀಶ್ ಅಜ್ಜಿಬೆಟ್ಟು ಹಾಗೂ ಅಬ್ದುಲ್ ರಝಾಕ್ ಗೂಡಿನಬಳಿ ಅವರು ನೇಮಕಗೊಂಡಿದ್ದಾರೆ.