ಜಿದ್ದ: ದಾರುನ್ನೂರು ದಶಮಾನೋತ್ಸವ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಂಗಮ ದಾರುನ್ನೂರು ಜಿದ್ದ ಘಟಕದ ವತಿಯಿಂದ ಇತ್ತೀಚಿಗೆ ಇಲ್ಲಿನ ಬನಿ ಮಲೀಕ್ ಹಿಲ್ ಟೋಪ್ ರೆಸ್ಟೋರೆಂಟಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾರುನ್ನೂರ್ ಜಿದ್ದಾ ಘಟಕದ ಅಧ್ಯಕ್ಷ ಶರೀಫ್ ತೋಡಾರ್, ದಾರುನ್ನೂರಿನ ಪ್ರಗತಿಗಾಗಿ ನಾವೆಲ್ಲರೂ ನಿಸ್ವಾರ್ಥವಾಗಿ ದುಡಿಯುವುದಾಗಿ ಭರವಸೆ ನೀಡಿದರು.
ದುಆ ಆಶೀರ್ವಚನ ನೀಡಿ ಮಾತನಾಡಿದ ಹುಸೈನ್ ದಾರಿಮಿ ರೆಂಜಳಾಡಿ ಉಸ್ತಾದ್, ಪ್ರವಾಸಿಗರ ಜೀವನ ಮತ್ತು ಕೊಡುಗೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭ ದಾರುನ್ನೂರು ಕೇಂದ್ರ ಸಮಿತಿ ಉಪಾಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಹಾಜಿ, ಕೋಶಾಧಿಕಾರಿ ಏರ್ ಇಂಡಿಯಾ ಉಸ್ಮಾನ್ ಹಾಜಿ, ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಮೊಹಮ್ಮದ್ ಹಾಜಿ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ ಎಚ್.ಬಿ.ಟಿ, ಜಾವಿದ್ ಕಲ್ಲಡ್ಕ, ರಫೀಕ್ ಹಾಜಿ ಕೆ.ಸಿ.ರೋಡ್, ಇಕ್ಬಾಲ್ ಎಮ್.ಕೆ, ರಿಯಾಝ್ ವಾಮಂಜೂರು, ರಫೀಕ್ ಅಡ್ಡೂರು, ಝುಬೈರ್ ಕಕ್ಕಿಂಜೆ, ಇಮ್ರಾನ್ ಚೊಕ್ಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ದಾರುನ್ನೂರು ಜಿದ್ದ ಘಟಕದ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಾಸಿಮ್ ಕಲ್ಲಡ್ಕ ವಂದಿಸಿದರು.