ಬೆಂಗಳೂರು: “ತೆಲಂಗಾಣ ಚುನಾವಣೆಗೆ ಪ್ರಚಾರಕ್ಕಾಗಿ ಕಾಂಗ್ರೆಸ್ (Congress) ನಮ್ಮ ರಾಜ್ಯದ ಸರ್ಕಾರಿ ಖಜಾನೆಯಿಂದ ಖರ್ಚು ಮಾಡಿ, ರಾಜ್ಯ ಸರ್ಕಾರದ ಹೆಸರಿನಲ್ಲಿ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಕಾಂಗ್ರೆಸ್ ಚುನಾವಣಾ ಅಕ್ರಮದಲ್ಲಿ ತೊಡಗಿದೆ” ಎಂದು ಬಿಜೆಪಿ ‘ಎಕ್ಸ್’ (ಟ್ವಿಟ್)ನಲ್ಲಿ ಆರೋಪ ಮಾಡಿದೆ. (BJP)
“ಕರ್ನಾಟಕವನ್ನು ಕಾಂಗ್ರೆಸ್ ತನ್ನ ಪಾಲಿನ ATM ಮಾಡಿಕೊಂಡಿದೆ ಎಂಬುದು ವೃಥಾ ಆರೋಪವಲ್ಲ. ಈ ಬಗ್ಗೆ ಕಣ್ಣಿಗೆ ಕಾಣುವ ಸಾಕ್ಷ್ಯಗಳೇ ಇವೆ. ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನೋಟಿಸ್ ನೀಡಿ ಛೀಮಾರಿ ಹಾಕಿದೆ. ನೈತಿಕವಾಗಿ ದಿವಾಳಿಯಾಗಿ, ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಮಾನವನ್ನು ದೇಶದೆಲ್ಲೆಡೆ ಹರಾಜು ಹಾಕುತ್ತಿದ್ದಾರೆ” ಎಂದು ದೂರಿದೆ.
“ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ? ಸರಿಯಾಗಿ ಬರ ನಿರ್ವಹಣೆಯನ್ನು ಮಾಡುತ್ತಿಲ್ಲ. ಪರಿಹಾರವೂ ಕೊಟ್ಟಿಲ್ಲ ಏಕೆ? ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಚುನಾವಣೆ ಮುಖ್ಯವೇ” ಎಂದು ಬಿಜೆಪಿ ಕೇಳಿದೆ.