Monday, December 23, 2024

ಬಿ.ವೈ.ವಿಜಯೇಂದ್ರ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ”: ಕಾಂಗ್ರೆಸ್ ಟೀಕೆ

by eesamachara
0 comment

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಆರ್​.ಅಶೋಕ್​ ಆಯ್ಕೆ ಆಗಿದ್ದು, ಬಿಜೆಪಿಯಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ.  ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

”ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..! ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ! “ಎಂದು ಕಾಂಗ್ರೆಸ್ ಎಕ್ಸ್​ (ಟ್ವಿಟರ್)ನಲ್ಲಿ ಟ್ವೀಟ್  ಮಾಡಿ ಟೀಕಿಸಿದೆ.

“ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿಯ ಅಜೆಂಡಾ! ಯಡಿಯೂರಪ್ಪರನ್ನು ಎರಡೆರಡು ಬಾರಿ ಕಣ್ಣೀರು ಹಾಕಿಸಿ ಹುದ್ದೆಯಿಂದ ಕೆಳಗಿಳಿಸಿ ಕಳಿಸಿತ್ತು. ಜಗದೀಶ್ ಶೆಟ್ಟರ್ ರವರನ್ನು ಅಧಿಕಾರದಿಂದ ದೂರವಿಟ್ಟು ವಂಚಿಸಿತ್ತು. ವಿ. ಸೋಮಣ್ಣರನ್ನು ವ್ಯವಸ್ಥಿತವಾಗಿ ಸೋಲಿನ ಹೊಂಡಕ್ಕೆ ತಳ್ಳಲಾಗಿತ್ತು. ಲಕ್ಷ್ಮಣ್ ಸವದಿಯವರನ್ನು ಮೂಲೆಗುಂಪು ಮಾಡಿ ಕೂರಿಸಲಾಗಿತ್ತು. ಈಗ ಸಿಎಂ ಆಗಿದ್ದ ಬೊಮ್ಮಾಯಿಯವರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತೆ ನಿರ್ಲಕ್ಷಿಸಲಾಗಿದೆ. ಇದೇ ಮಾದರಿಯಲ್ಲಿ ವಿಜಯೇಂದ್ರ ಕೂಡ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ” ಅಷ್ಟೇ! ಎಂದಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios