Monday, December 23, 2024

ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ: ಮಂಗಳೂರಿನಲ್ಲಿ ಸಂಭ್ರಮಿಸಿದ ಕೈ ಕಾರ್ಯಕರ್ತರು

by eesamachara
0 comment

ಮಂಗಳೂರು: ಮೋದಿ ಉಪನಾಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಕ್ಕೆ ಜಯಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಸತ್ಯ ಮತ್ತು ಪ್ರೀತಿಗೆ ಸಂದ ಜಯ ಹಾಗೂ ಸುಳ್ಳು ಮತ್ತು ದ್ವೇಷಕ್ಕೆ ಆದ ಸೋಲು. ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ದ್ವೇಷದಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಜನರಿಗೆ ಸತ್ಯಾಂಶ ತಿಳಿದಿದೆ. ದೇಶದಲ್ಲಿ ರಾಹುಲ್ ಗಾಂಧಿ ಅವರ ಬಗೆಗಿನ ಜನಪ್ರೀಯತೆ, ವರ್ಚಸ್ಸು ಹೆಚ್ಚುತ್ತಲೇ ಇದ್ದು, ಬಿಜೆಪಿಗೆ ಸಹಿಲಾಗುತ್ತಿಲ್ಲ ಎಂದರು.

ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮ.ನ.ಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಎ.ಸಿ.ವಿನಯರಾಜ್, ಅಶ್ರಫ್ ಬಜಾಲ್, ಸಂಶುದ್ದೀನ್ ಬಂದರ್, ಅನಿಲ್ ಕುಮಾರ್ ಪೂಜಾರಿ, ಲುಕ್ಮಾನ್ ಬಂಟ್ವಾಳ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಮನೋರಾಜ್ ರಾಜೀವ, ಡಾ.ಬಿ.ಜಿ.ಸುವರ್ಣ, ಪದ್ಮನಾಭ ಅಮೀನ್, ಸುಹಾನ್ ಆಳ್ವ, ತನ್ವೀರ್ ಶಾ, ಶಾಂತಲಾ ಗಟ್ಟಿ, ಟಿ.ಹೊನ್ನಯ್ಯ, ಶಬ್ಬೀರ್ ಎಸ್. ನೀರಜ್ ಚಂದ್ರಪಾಲ್, ನಝೀರ್ ಬಜಾಲ್, ವಹಾಬ್ ಕುದ್ರೋಳಿ, ಲಿಯಾಕತ್ ಶಾ, ರವಿ ಪೂಜಾರಿ, ಚೇತನ್ ಕುಮಾರ್, ವಿಕಾಸ್ ಶೆಟ್ಟಿ, ಜಯರಾಜ್ ಕೋಟ್ಯಾನ್, ರಮಾನಂದ ಪೂಜಾರಿ, ಸೌಹಾನ್ ಎಸ್.ಕೆ, ಮಜೀದ್ ಬಂದರ್, ಡಿ.ಎಂ.ಮುಸ್ತಫಾ, ನಿತ್ಯಾನಂದ ಶೆಟ್ಟಿ, ರಾಕೇಶ್ ದೇವಾಡಿಗ, ಅಲಿಸ್ಟರ್ ಡಿಕುನ್ಹ, ಮೊಹಮ್ಮದ್ ಕುಂಜತ್ತಬೈಲ್, ಸಲೀಂ ಮಕ್ಕ, ಚಂದ್ರಹಾಸ ಪೂಜಾರಿ, ಸ್ವಾನ್ ಡಿಸೋಜ, ಫಯಾಝ್ ಅಮ್ಮೆಮ್ಮಾರ್, ರೋಬಿನ್ ಅಂಚನ್, ಹಬೀಬ್ ಕಣ್ಣೂರ್, ಟಿ.ಸಿ.ಗಣೇಶ್, ಪ್ರವೀಣ್ ಊರ್ವ, ಪೃಥ್ವಿ ಸಾಲ್ಯಾನ್, ಸೀತಾರಾಂ ಶೆಟ್ಟಿ, ನವೀನ್ ರೈ, ಕಿಶೋರ್, ಚಂದಾವರ್ಕರ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಚಿತ್ತರಂಜನ್ ಶೆಟ್ಟಿ, ರಫೀಕ್ ಕಣ್ಣೂರ್, ಟಿ.ಕೆ.ಸುಧೀರ್, ಪವನ್ ಸಾಲ್ಯಾನ್, ಜೇಮ್ಸ್ ಶಿವಭಾಗ್, ನಜೀಬ್ ಮಂಚಿ, ಹ್ಯಾಂಡ್ಲಿ ಸೈಮನ್, ಸಾಹಿಲ್, ಓಂಶ್ರೀ ಇದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios