ಗುರುಪುರ: ಫೈವ್ ಸ್ಟಾರ್ ಯಂಗ್ ಬಾಯ್ಸ್ ಹಾಗೂ ಎಸ್.ಡಿ.ಎಂ.ಸಿ ವತಿಯಿಂದ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಸೋಮವಾರ ಆಚರಿಸಲಾಯಿತು.
ಈ ವೇಳೆ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ.ಪಿ ಮಾತನಾಡಿ, ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಪ್ರಕೃತಿಯ ಋಣ ತೀರಿಸಬೇಕಿದೆ. ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರ ಸಂರಕ್ಷಣೆ ಬಗ್ಗೆ ತಿಳಿದುಕೊಳ್ಳಬೇಕು. ಪ್ರಸಕ್ತ ದಿನಗಳಲ್ಲಿ ಪರಿಸರದ ಮಹತ್ವ ತಿಳಿದು ಸಕಾಲಕ್ಕೆ ಉಳಿಸಿ, ಬೆಳೆಸುವುದು ಅವಶ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮೊಹಮ್ಮದ್ ಆಲಿ ಬಂಡಸಾಲೆ, ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷ ಹಬೀಬ್ ಕಟ್ಟಪುಣಿ, ಶಿಕ್ಷಕಿಗಳಾದ ಹಿಲ್ಡಾ ವೇಗಸ್, ಮೋಂತಿ ಮರಿಯಾ ಮೊಂತೋರೆ, ಕಾವ್ಯ, ಶ್ವೇತಾ.ಎಂ, ಆಂಜೆಲಿನ್ ಮೇವಿಸ್ ವಾಸ್ ಉಪಸ್ಥಿತರಿದ್ದರು.