ಮಂಗಳೂರು: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂರತ್ ನ್ಯಾಯಾಲಯ ನೀಡಿದ ತೀರ್ಪುನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿತು.
ಬಿಜೆಪಿ ಸರ್ಕಾರ ಸರ್ಕಾರಿಯಂತ್ರವನ್ನು ದುರುಪಯೋಗಪಡಿಸಿ ರಾಹುಲ್ ಗಾಂಧಿ ಅವರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. 2019ರ ಲೋಕಸಭಾ ಚುನಾವಣಾ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ದೇಶದಲ್ಲಿ ನಡೆಯುತ್ತಿರುವ ಸತ್ಯಾಂಶದ ಕುರಿತು ಮಾತನಾಡಿದ್ದಾರೆ. ಪ್ರಧಾನಿ ಹೆಸರನ್ನು ಉಲ್ಲೇಖಿಸದೆ ನೀರವ್ ಮೋದಿ, ಲಲಿತ್ ಮೋದಿ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದರು. ಆದರೆ ಬಿಜೆಪಿ ಸರ್ಕಾರ ನಿಯೋಜಿತವಾಗಿ ಅವರ ವಿರುದ್ಧ ಷಡ್ಯಂತರ ರೂಪಿಸಿದೆ ಎಂದು ಪ್ರಧಾನಿ ಮೋದಿ ಅವರ ಪೋಟೊಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ಕಾರ್ಯದರ್ಶಿ ನಾಸೀರ್ ಸಾಮಾಣಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ಇಸ್ಮಾಯೀಲ್ ಬಿ.ಎಸ್, ಫಯಾಝ್ ಅಮ್ಮೆಮ್ಮಾರ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಯೋಗೀಶ್ ನಾಯಕ್, ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕ ಸುಹಾನ್ ಎಸ್.ಕೆ, ಜಿಲ್ಲಾ ಕಾರ್ಯದರ್ಶಿ ಮಾಲ್ಕೊಂ ಡಿಸೋಜ, ಮಹೇಶ್ ಕೊಂಚಾಡಿ, ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸಮರ್ಥ್ ಭಟ್, ಶಾಹಿಲ್ ಎಕೆ, ಒಂ ಶ್ರೀ, ರಶೀದ್ ಉಳ್ಳಾಲ, ಅಲ್ತಾಫ್ ದೇರಳಕಟ್ಟೆ, ಶಿಯಾಝ್, ನಿಯಾಝ್, ರಾಜ್, ಪ್ರಕಾಶ್ ಉಪಸ್ಥಿತರಿದ್ದರು.
