ಮಂಗಳೂರು: ಅಡ್ಡೂರು ಜಂಕ್ಷನ್ ನಲ್ಲಿ ನವೀಕೃತಗೊಂಡ ಬದ್ರಿಯಾ ಮಸೀದಿಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಶುಕ್ರವಾರ ಉದ್ಘಾಟಿಸಿದರು.
ವಕ್ಫ್ ಕಾರ್ಯ ನಿರ್ವಹಿಸಿ ಬಳಿಕ ಮಾತನಾಡಿದ ಅವರು, ಮಸೀದಿಗಳು ಸೃಷ್ಟಿ ಕರ್ತನನ್ನು ಆರಾಧಿಸುವ ಪವಿತ್ರ ಗೇಹ ವಾಗಿದ್ದು ಅದರ ಅಧಿಕಾರ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುತ್ತದೆ. ಆದ್ದರಿಂದ ಮಸೀದಿಗಳಲ್ಲಿ ಅತ್ಯಂತ ಶಿಸ್ತಿನಿಂದ ಆರಾಧನೆಗಳಲ್ಲಿ ತೊಡಗಿಸಿಕೊಂಡು ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು. ಪ್ರತಿಯೊಬ್ಬ ಮುಸ್ಲಿಂ ವಿಶ್ವಾಸಿ ತನ್ನ ಮನಸ್ಸನ್ನು ಶುದ್ಧಗೊಳಿಸಿ ನಿತ್ಯ ನಮಾಝನ್ನು ಮಾಡುವ ಮೂಲಕ ಆಧ್ಯಾತ್ಮಿಕತೆ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮದ್ ಬಾವ ಅಂಗಡಿಮನೆ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಶರೀಫ್ ದಾರಿಮಿ, ಯೂಸುಫ್ ಹಾಜಿ ಮಳಲಿ, ಇಸ್ಹಾಕ್ ಗರಡಿ, ಯಾಕೂಬ್ ಫೈಝಿ, ಕೆ.ಎಂ.ಮಹಮ್ಮದ್ ರಫೀಕ್ ಇಂದಾಧಿ, ಹಾಜಿ ಎ.ಎಸ್.ಬಾವುಞಿ, ಎ.ಎಸ್. ಅಬ್ದುಲ್ ಖಾದರ್ ತೋಕೂರು, ಇಬ್ರಾಹೀಂ ಫಲ್ಗುಣಿ, ಎಂ.ಎಚ್.ಮೊಹಿಯುದ್ದೀನ್, ಯು.ಪಿ.ಇಬ್ರಾಹೀಂ, ಇಬ್ರಾಹೀಂ ಗೋವಾ, ಮಾಜಿ ಮೇಯರ್ ಕೆ. ಅಶ್ರಫ್, ಸುಹೈಲ್ ಕಂದಕ್, ಎಂ.ಎಸ್.ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಬಿ.ಜೆ.ಎಂ ಅಡ್ಡೂರು ಖತೀಬ್ ಸ್ವದಖತುಲ್ಲಾ ಫೈಝಿ ಪ್ರಾಸ್ತಾವಿಕ ಮಾತನಾಡಿದರು. ಜಮಾಅತ್ ಉಪಾಧ್ಯಕ್ಷ ಝೈನುದ್ದೀನ್ ಸ್ವಾಗತಿಸಿದರು.
ಅಸರ್ ನಮಾಝಿನ ಬಳಿಕ ನಡೆದ ಮೌಲೀದ್ ಪಾರಾಯಣಕ್ಕೆ ಶೈಖುನಾ ಬೊಳ್ಳೂರ್ ಉಸ್ತಾದ್ ನೇತೃತ್ವ ವಹಿಸಿದರು.
ಮಸೀದಿ ಉದ್ಘಾಟನೆ ಪ್ರಯುಕ್ತ ಮಾ.11 ರಂದು ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉಸ್ತಾದ್ ಅನ್ವರ್ ಮುಹ್ಯುದ್ದೀನ್ ಹುದವಿ ಮುಖ್ಯ ಪ್ರಭಾಷಣ ಗೈಯಲಿರುವರು.
ಮಾ.12 ರಂದು ನಡೆಯಲಿರುವ ‘ಸೌಹಾರ್ದ ಸಭಾ’ ಕಾರ್ಯಕ್ರಮದಲ್ಲಿ ಕ್ಯಾಲಿಕಟ್ ಖಾಝಿ ಸಯ್ಯಿದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ದುಆ ನೆರವೇರಿಸಲಿದ್ದಾರೆ. ಬಿ.ಜೆ.ಎಂ ಅಡ್ಡೂರು ಖತೀಬ್ ಸ್ವದಖತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಮಾಅತ್ ಅಧ್ಯಕ್ಷ ಅಹಮದ್ ಬಾವ ಅಂಗಡಿಮನೆ ಅಧ್ಯಕ್ಷತೆ ವಹಿಸಲಿರುವರು. ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹೀಂ ಪ್ರಾಸ್ತಾವಿಕ ಮಾತನಾಡಲಿದ್ದಾರೆ.
ಸಭೆಯಲ್ಲಿ ಎಸ್.ವೈ. ಎಸ್ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಂಗಳೂರು ಕ್ಯಾಂಪಸ್ ಮಿನಿಸ್ಟರ್ ಸಂತ ಅಲೋಶಿಯಸ್ ಕಾಲೇಜಿನ ಫಾ. ಸುಜಯ್ ಡ್ಯಾನಿಯಲ್ ಎಸ್.ಜೆ, ಎಸ್ಕೆಎಸ್ಸೆಸೆಫ್ ರಾಜ್ಯ ಕಾರ್ಯದರ್ಶಿ ಪ್ರೊ. ಅನೀಸ್ ಕೌಸರಿ ಘನ ಉಪಸ್ಥಿತಿ ವಹಿಸಲಿದ್ದು, ಜಿಲ್ಲೆಯ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿರುವರು.