ಮಂಗಳೂರು: ಗುರುವಾರ ರಾತ್ರಿ ಶವ್ವಾಲ್ ನ ಪ್ರಥಮ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಶನಿವಾರ ಪಶ್ಚಿಮ ಕರಾವಳಿ ತೀರದಲ್ಲಿ ಶನಿವಾರ (ಎ.22) ‘ಈದುಲ್ ಫಿತರ್’ ಆಚರಿಸಲು ನಿರ್ಧರಿಸಲಾಗಿದೆ.
ಶುಕ್ರವಾರ ರಂಝಾನ್ ಮಾಸದ 30ನೇ ಉಪವಾಸದ ವ್ರತ ಆಚರಿಸಿ ಶನಿವಾರ ‘ಈದುಲ್ ಫಿತರ್’ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಆಲ್ ಬುಖಾರಿ ಮತ್ತು ಭಟ್ಕಳ ಖಾಝಿ ಪ್ರತ್ಯೇಕ ಹೇಳಿಕೆಯಲ್ಲಿ ಘೋಷಿಸಿದ್ದಾರೆ.