ಮಂಗಳೂರು: RTI ಕಾರ್ಯಕರ್ತ ವಿನಾಯಕ ಬಾಳಿಗ ಅವರ ಹತ್ಯೆಯಾಗಿ 8 ವರ್ಷ ಪೂರ್ಣಗೊಂಡಿದ್ದು, ಹತ್ಯೆ ಖಂಡಿಸಿ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ನಾಳೆ (ಮಾ.21) ಮಂಗಳೂರಿನಲ್ಲಿ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ.
ಬಾಳಿಗ ಅವರ ಹತ್ಯೆ ನಡೆದು 8 ವರ್ಷಗಳು ಕಳೆದರೂ ನ್ಯಾಲಯದಲ್ಲಿ ಕೇಸು ನಡೆಯುತ್ತಿದ್ದು, ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅಂದು ಸಂಜೆ 4 ಗಂಟೆಗೆ ನಗರದ ವೆಂಕಟರಮಣ ದೇವಳದಿಂದ ಬಾಳಿಗ ಅವರ ಮನೆವರೆಗೆ “ಬಾಳಿಗಾ ನಡೆದ ದಾರಿಯಲ್ಲಿ ಹೆಜ್ಜೆ ಹಾಕೋಣ ಬನ್ನಿ” ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.