ಬೆಂಗಳೂರು: ರಾಜ್ಯದಲ್ಲಿ ತೆರವಾಗಲಿರುವ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣಾ ಆಯೋಗವು ಗುರುವಾರ ಚುನಾವಣೆ ಘೋಷಣೆ ಮಾಡಿದ್ದು, ಜೂನ್ 3ರಂದು ಮತದಾನ ನಡೆಯಲಿದೆ.
ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದ್ದು, ನಾಮಪತ್ರ ಪರಿಶೀಲನೆ ಮೇ 17 ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ.16 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ.20 ಕೊನೆಯ ದಿನವಾಗಿದೆ.
ಇದೇ ವರ್ಷ ಜೂ.21 ರಂದು ರಾಜ್ಯದ ಈಶಾನ್ಯ ಪದವೀಧರರ ಕ್ಷೇತ್ರದ ಡಾ.ಚಂದ್ರಶೇಖರ್ ಬಿ.ಪಾಟೀಲ್, ನೈರುತ್ಯ ಪದವೀಧರರ ಕ್ಷೇತ್ರದ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರರ ಕ್ಷೇತ್ರದ ಎ.ದೇವೇಗೌಡ, ಅಗ್ನೇಯ ಶಿಕ್ಷಕರ ಕ್ಷೇತ್ರದ ವೈ.ಎ. ನಾರಾಯಣ ಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಎಸ್.ಎಲ್. ಭೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿ ತಿಬ್ಬೇಗೌಡ ಅವರ ಅವಧಿ ಕೊನೆಗೊಳ್ಳಲಿದೆ.