ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ಯಡಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಈವರೆಗೆ 100 ಕೋಟಿ ದಾಟಿ ದಾಖಲೆ ಸೃಷ್ಟಿಸಿದೆ.
ಯೋಜನೆ ಜಾರಿಯಾದ ದಿನವಾದ ಜೂನ್ 11ರಿಂದ ನ.22ರ ವರೆಗೆ 165 ದಿನಗಳಲ್ಲಿ 4 ನಾಲ್ಕು ನಿಗಮಗಳ ಸಾರಿಗೆ ಬಸ್‌ಗಳಲ್ಲಿ 178.67 ಕೋಟಿ ಜನರು ಪ್ರಯಾಣಿಸಿದ್ದಾರೆ. ಈ ಪೈಕಿ 100.47 ಕೋಟಿ ಜನರು ಮಹಿಳೆಯರಾಗಿದ್ದಾರೆ. ಅವರ ಪ್ರಯಾಣದ ಟಿಕೆಟ್ ಮೌಲ್ಯ 2,397 ಕೋಟಿ ರೂ. ದಾಟಿದೆ.
ಯಾವ ನಿಗಮದಲ್ಲಿ ಎಷ್ಟು ಮಹಿಳಾ ಪ್ರಯಾಣಿಕರ ಪ್ರಯಾಣ ಮತ್ತು ಪ್ರಯಾಣದ ಮೌಲ್ಯ :
ಕೆಎಸ್ಸಾರ್ಟಿಸಿ – 30,12,17,350 ಮಹಿಳೆಯರ ಪ್ರಯಾಣ, ಮೌಲ್ಯ- 900,29,21,508 ರೂ.
ಬಿಎಂಟಿಸಿ – 32,69,60,082 ಮಹಿಳೆಯರ ಪ್ರಯಾಣ, ಮೌಲ್ಯ- 420,82,19,200 ರೂ.
ವಾಯುವ್ಯ- 23,37,23,007 ಮಹಿಳೆಯರ ಪ್ರಯಾಣ, ಮೌಲ್ಯ- 600,69,91,513 ರೂ.
ಕಲ್ಯಾಣ ಕರ್ನಾಟಕ – 14,28,55,745 ಮಹಿಳೆಯರ ಪ್ರಯಾಣ, ಮೌಲ್ಯ- 475,98,79,341 ರೂ.
ನ.24 ರಂದು ಶಕ್ತಿ ಶತಕೋಟಿ ಸಂಭ್ರಮ ಕಾರ್ಯಕ್ರಮ: “ಶಕ್ತಿ” ಶತಕೋಟಿ ಮೈಲಿಗಲ್ಲಿನ ಸಂಭ್ರಮ ಹಾಗೂ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನವೆಂಬರ್ 24 ರಂದು ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವರು ಭಾಗವಹಿಸಲಿದ್ದಾರೆ.
