ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯವಾಗಿರುವ ಬಗ್ಗೆ ಅವರದೇ ಪಕ್ಷ ಟಿಎಂಸಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದೆ.
“ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ” ಎಂದು ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ ಟ್ವೀಟ್ ಮಾಡಿದೆ.
ಮಮತಾ ಅವರು ಪಕ್ಷದ ಮುಖ್ಯಸ್ಥರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹರೀಶ್ ಚಟರ್ಜಿ ಸ್ಟ್ರೀಟ್ ನಿವಾಸಕ್ಕೆ ಹಿಂತಿರುಗಿದಾಗ ಅಲ್ಲಿ ಜಾರಿಬಿದ್ದಾರೆ. ಸದ್ಯ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
“ಮಮತಾ ಅವರು ತನ್ನ ಡ್ರಾಯಿಂಗ್ ರೂಮಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಜಾರಿ ಕೆಳಗೆ ಬಿದ್ದಿದ್ದಾರೆ. ಈ ರಭಸಕ್ಕೆ ಹಣೆಗೆ ಗಾಜಿನ ಶೋಕೇಸ್‌ಗೆ ಬಡಿದಿದೆ. ಇದು ಆಕೆಯ ಹಣೆಯ ಮೇಲೆ ಆಳವಾದ ಗಾಯ ಮತ್ತು ಅಪಾರ ರಕ್ತಸ್ರಾವಕ್ಕೆ ಕಾರಣವಾಯಿತು” ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.